ಮಲೇಬೆನ್ನೂರು, ಜು.4- ಇಲ್ಲಿನ ಪುರಸಭೆಯ ಎಲ್ಲಾ 23 ವಾರ್ಡ್‌ಗಳಿಗೆ ಚುನಾವಣೆ ನಡೆಸಬೇಕಾಗಿರುವುದರಿಂದ ವಾರ್ಡುವಾರು ಸಿದ್ದಪಡಿಸಿ, ಪ್ರಕಟಿಸಿದ್ದ ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆ ಅರ್ಜಿಗಳು ಬಂದ ಹಿನ್ನೆಲೆಯಲ್ಲಿ ಪುರಸಭೆ ಮತ್ತು ನಾಡಕಚೇರಿಗಳು ಸುಮಾರು 8 ವಾರ್ಡ್‌ಗಳಲ್ಲಿ ಮನೆ ಮನೆಗೆ ತೆರಳಿ ಪರಿಶೀಲಿಸಿದರು. ಆಕ್ಷೇಪಣೆ ಸಲ್ಲಿಸಿದ್ದ ಅರ್ಜಿದಾರರ ಸಮಸ್ಯೆಯನ್ನು ಸ್ಥಳದಲ್ಲಿಯೇ ಇತ್ಯರ್ಥಗೊಳಿಸಿದರು. 2 ದಿನಗಳಿಂದ ನಡೆದ ಈ ಪರಿಶೀಲನೆ ಶನಿವಾರ ಸಂಜೆ ಮುಕ್ತಾಯಗೊಂಡಿತು ಎಂದು ಉಪತಹಶೀಲ್ದಾರ್ ಆರ್.ರವಿ ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ದಿನಕರ್, ಪುರಸಭೆ ಅಧಿಕಾರಿಗಳಾದ ಪ್ರಭು, ಉಮೇಶ್, ಚಿತ್ರಪ್ಪ, ಪರಶುರಾಮ್, ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾ ಧಿಕಾರಿ ಕೊಟ್ರೇಶ್, ಪ್ರದೀಪ್ ಮತ್ತಿತರರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.