ದೇಶದ ಆರ್ಥಿಕ ಪುನಶ್ಚೇತನಕ್ಕೆ ವಿದ್ಯಾರ್ಥಿಗಳೂ ಸ್ಪಂದಿಸಬೇಕಿದೆ : ಡಾ. ಎಂ.ಜಿ. ಈಶ್ವರಪ್ಪ

ದಾವಣಗೆರೆ, ಜ.26- ಕೊರೊನಾದಿಂದಾಗಿ ಕುಸಿತ ಕಂಡ ಭಾರತದ ಆರ್ಥಿಕತೆ ಪುನಶ್ಚೇತನ ಗೊಳ್ಳುವಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯ ಪಾತ್ರವೂ ಮಹತ್ತರವಾಗಿದ್ದು, ತಾಂತ್ರಿಕ ಮತ್ತು ತಂತ್ರಜ್ಞಾನ ವಿದ್ಯಾರ್ಥಿಗಳೂ ಇದನ್ನು ಗಮನದಲ್ಲಿಟ್ಟುಕೊಂಡು ಕಾರ್ಯಗೈಯಬೇಕಿದೆ ಎಂದು  ಜಾನ ಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ಹೇಳಿದರು.

ನಗರದ ಬಾಪೂಜಿ ತಾಂತ್ರಿಕ ಮಹಾವಿದ್ಯಾಲ ಯದ ಬಾಲಕರ ಹಾಸ್ಟೆಲ್‌ ಆವರಣದಲ್ಲಿ ಭಾರ ತದ 72ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಷ್ಟ್ರಾಭಿಮಾನದೊಂದಿಗೆ ಸಂವಿಧಾನಬದ್ಧವಾಗಿ ವ್ಯವಹರಿಸುತ್ತಾ ರಾಷ್ಟ್ರೋನ್ನತಿಗೆ ಎಲ್ಲರೂ ಕಾರಣರಾಗಬೇಕಿದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಆರ್. ರಮಾ ನಂದ್‌ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಜೈಲು ಶಿಕ್ಷೆ ಅನುಭವಿಸಿದ, ಜೀವವನ್ನೇ ತೆತ್ತ ತ್ಯಾಗ ಬಲಿದಾನಿಗಳನ್ನು ಸ್ಮರಿಸುತ್ತಾ ಸಂವಿಧಾನದ ಆಶಯಗಳಿಗನುಗುಣವಾಗಿ ಕರ್ತವ್ಯ ನಿರ್ವಹಿ ಸುವ ಸಂಕಲ್ಪ ಮಾಡುವ ದಿನವಿದು ಎಂದರು. 

ಮಹಾವಿದ್ಯಾಲಯ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಪ್ರಾಂಶುಪಾಲ ಡಾ. ಹೆಚ್‌.ಬಿ. ಅರವಿಂದ್, ಹಾಸ್ಟೆಲ್‌ ವಾರ್ಡನ್‌ ಡಾ. ಜಿ. ಮಾನವೇಂದ್ರ, ಉಪ ವಾರ್ಡನ್‌ಗಳಾದ ಡಾ. ಎನ್‌. ಬಸವರಾಜ್, ಡಾ. ವೀಣಾ ಕುಮಾರ್‌, ವ್ಯವಸ್ಥಾಪಕ ರುದ್ರಪ್ಪ, ಡಾ. ಎಸ್‌. ಸುರೇಶ್‌, ಡಾ. ಜಿ.ಪಿ. ದೇಸಾಯಿ, ಕಾಂತೇಶ್‌, ಚನ್ನಪ್ಪ, ಕರಿಬಸಪ್ಪ ಮುಂತಾದವರು ಉಪಸ್ಥಿತರಿದ್ದರು. 

ಸಾಯಿಕಿರಣ್‌ ದೇಶಭಕ್ತಿ ಗೀತೆಯೊಂದಿಗೆ ಸ್ವಾಗತಿಸಿದರು. ಶ್ರವಣ್‌ ಪರಿಚಯ ಭಾಷಣ ಮಾಡಿದರೆ, ಪೂಜಾ ಬಿ.ಎಸ್‌. ವಂದಿಸಿದರು. 

error: Content is protected !!