ದಾವಣಗೆರೆ, ಏ. 3- ದಾವಣಗೆರೆ ವಿಶ್ವವಿದ್ಯಾಲಯದ ದೃಶ್ಯಕಲಾ ಮಹಾವಿದ್ಯಾಲಯದ ಶಿಲ್ಪಕಲಾ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಮಹದೇವ ಕ್ಷೌರ ಅವರು ಚಿನ್ನದ ಪದಕ ಪಡೆದಿದ್ದು, ಅವರ ಈ ಸಾಧನೆಯನ್ನು ಗುರುತಿಸಿ ನಗರದ ದರ್ಶನ್ ಕುಟೀರದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಸತ್ಕಾರ ಸಮಾರಂಭದಲ್ಲಿ ಶಿಲ್ಪಕಲಾ ಅಕಾಡೆಮಿ ಸದಸ್ಯ ವೈ. ಕುಮಾರ್, ಹಿರಿಯ ಕಲಾವಿದ ಮಹಲಿಂಗಪ್ಪ ಶಿಲ್ಪಿ, ದರ್ಶನ್ ಕುಟೀರದ ಬಿ.ಆರ್. ಮಲ್ಲಣ್ಣ ಹಾಗೂ ಮಹದೇವ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.