ಹರಿಹರ,ಏ.3- ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹಾಲೇಶಗೌಡ ಮತ್ತು ಉಪಾಧ್ಯಕ್ಷರಾಗಿ ಕೆ. ಜೈಮುನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹೆಚ್.ಸುನೀತಾ ತಿಳಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಜಿ. ವೀರಯ್ಯ ಮತ್ತು ಜಿ. ಬಿ. ಹಾಲೇಶ್‌ಗೌಡ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕೆ. ಜೈಮುನಿ ಮತ್ತು ಹಿದಾಯಿತ್‌ಉಲ್ಲಾ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಜಿ. ವೀರಯ್ಯ ಮತ್ತು ಉಪಾಧ್ಯಕ್ಷ ಸ್ಥಾನದ ಹಿದಾಯಿತ್‌ಉಲ್ಲಾ ನಾಮಪತ್ರ ಹಿಂಪಡೆದರು. ಅಧ್ಯಕ್ಷರಾಗಿ ಹಾಲೇಶಗೌಡ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಜೈಮುನಿ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ನಿರ್ದೇಶಕರಾದ ಜಿ. ವೀರಯ್ಯ, ಬಸವರಾಜ್ ಬಾಳೆಮರದ, ಟಿ. ಬಸವರಾಜ್, ಹಿದಾಯತ್ ಉಲ್ಲಾ, ಅಬ್ಬಾಸ್ ಅಲಿ ಉರಕಡ್ಲಿ, ಮೇಸಾಕ್, ಪ್ರವೀಣ್ ಮಜ್ಜಿಗೆ, ರಾಮಚಂದ್ರಪ್ಪ, ಹೆಚ್.ಎಂ. ಗಂಗಮ್ಮ, ಶಾಂತಮ್ಮ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಬಿ.ಶಿವರಾಜ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೈಯದ್‌ಇರ್ಫಾನ್ ಉಲ್ಲಾ, ಗುತ್ತೂರು ಶಂಕ್ರಪ್ಪ ಗೌಡ್ರು, ಚಂದ್ರಪ್ಪ ಇತರರು ಉಪಸ್ಥಿತರಿದ್ದರು.