ಭರಮಸಾಗರ, ಮಾ. 27- ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಇಲ್ಲಿನ ಮಹಿಳಾ ಮಂಡಳಿ ವತಿಯಿಂದ ಹಿರಿಯ ಪತ್ರಕರ್ತ ಬಿ.ಜೆ. ಅನಂತಪದ್ಮನಾಭ ರಾವ್ ಅವರ ತಾಯಿ – 95 ವರ್ಷದ ಶ್ರೀಮತಿ ಜಯಮ್ಮ ಅವರಿಗೆ ಹಿರಿಯ ಮಹಿಳೆಯೆಂದು ಗುರು ತಿಸಿ, ಅವರ ಸ್ವಗೃಹದಲ್ಲಿ ಸನ್ಮಾನಿಸ ಲಾಯಿತು. ಈ ವೇಳೆ ಸುಮಾ ಚೆನ್ನೇಶ್, ಕೆ.ಇ.ಬಿ ಪಾರ್ವತಮ್ಮ, ಕೋಮಲ ಜಗದೀಶ್, ನಂದಿನಿ ರುದ್ರಾಚಾರಿ, ಶೈಲಾ, ಜಿ.ಎಸ್. ರಶ್ಮಿ, ಐ.ಎಂ ಮಂಜುಳಾ ವಿಜಯ, ವಿಜಯಲಕ್ಷ್ಮಿ ಇತರರು ಇದ್ದರು.
ಹಿರಿಯ ಮಹಿಳೆ ಜಯಮ್ಮಗೆ ಗೌರವ
