ದಾವಣಗೆರೆ, ಮಾ. 27 – ಜಾನಪದ ಪ್ರದರ್ಶಕ ಕಲೆಗಳ ಕುರಿತು ಸಂಶೋ ಧನಾ ಅಧ್ಯಯನ ನಡೆಸಿ ಮಹಾಪ್ರಬಂಧ ಮಂಡಿಸಿದ ದಾವಣಗೆರೆ ವಿಶ್ವವಿ ದ್ಯಾನಿಲಯ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಶಿವಕುಮಾರ ಕಣಸೋಗಿ ಅವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ಡಿ. ಲಿಟ್ ಪದವಿ ಪ್ರದಾನ ಮಾಡಿದೆ.
`ಜಾನಪದ ಪ್ರದರ್ಶಕ ಕಲೆಗಳ ರೂಪಾಂತರದ ಮೇಲೆ ಡಿಜಿಟಲ್ ಮಾಧ್ಯಮದ ಪ್ರಭಾವ: ಬಹು ಆಯಾ ಮದ ವಿಶ್ಲೇಷಣೆ’ ಕುರಿತು ಶಿವಕುಮಾರ ಕಣಸೋಗಿ ಅವರು ಸಂಶೋಧನಾ ಮಹಾಪ್ರಬಂಧ ಮಂಡಿಸಿದ್ದರು. ಸಂಗೀತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಾಗೇಶ ಬೆಟ್ಟಕೊಪ್ಪ ಅವರು ಡಿ. ಲಿಟ್ ಪದವಿ ಘೋ ಷಣೆ ಮಾಡಿ, ಪ್ರಮಾಣ ಪತ್ರ ಪ್ರದಾನ ಮಾಡಿದರು.