ಬೇಸಿಗೆ ಬಿಸಿಲಿನ ತಾಪ ದಿನೇ ದಿನೇ ಹೆಚ್ಚಾಗುತ್ತಿದ್ದು, ಜನ – ಜಾನುವಾರು ಮತ್ತು ಪ್ರಾಣಿ – ಪಕ್ಷಿಗಳು ಸೇರಿದಂತೆ ಸಕಲ ಜೀವ ಸಂಕುಲಕ್ಕೆ ನೀರಿನ ಅಗತ್ಯತೆ ಕೂಡಾ ಹೆಚ್ಚಾಗುತ್ತಿದೆ. ಇದರ ನಡುವೆ ಶುಕ್ರವಾರ ಹೊಳೆಸಿರಿಗೆರೆ ಗ್ರಾಮದಲ್ಲಿ ಕೋತಿಯೊಂದು ಜನ ಕುಡಿಯಲು ತಂದಿದ್ದ ನೀರಿನ ಬಾಟಲ್ ಅನ್ನು ತೆಗೆದುಕೊಂಡು ಹೋಗಿ ಬಾಟಲ್ ಎತ್ತಿ ನೀರನ್ನು ಕುಡಿದು ದಾಹ ನೀಗಿಸಿಕೊಂಡ ದೃಶ್ಯ ಎಲ್ಲರ ಮನ ಮಿಡಿಯಿತು.
ಚಿತ್ರ ಸಂಗ್ರಹ : ಜಿಗಳಿ ಪ್ರಕಾಶ್