ನಗರದಲ್ಲಿ ಇಂದು ದತ್ತಿ ಉಪನ್ಯಾಸ

ನಗರದಲ್ಲಿ ಇಂದು  ದತ್ತಿ ಉಪನ್ಯಾಸ

ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಶಾಲಾ-ಕಾಲೇಜಿನ ಅಂಗಳದಲ್ಲಿ ಸಾಹಿತ್ಯೋ ತ್ಸವದ ಅಂಗವಾಗಿ ದತ್ತಿ ಉಪನ್ಯಾಸ  ಕಾರ್ಯಕ್ರಮವು ಇಂದು ಬೆಳಿಗ್ಗೆ 11ಕ್ಕೆ ಮೃತ್ಯುಂಜಯ ಶುಶ್ರೂಷಾ ಶಾಲೆ ಆವರಣದಲ್ಲಿ ನಡೆಯಲಿದೆ.  ಕಾರ್ಯಕ್ರಮವನ್ನು ಶಾಲೆಯ ಅಧ್ಯಕ್ಷ ಬಿ.ಸಿ. ರಾಜಣ್ಣ ಉದ್ಘಾಟಿಸ ಲಿದ್ದು, ಅಧ್ಯಕ್ಷತೆಯನ್ನು ಶ್ರೀಮತಿ ಕಮಲ ಡಿ. ಪಾಟೀಲ್‌ ವಹಿಸಲಿದ್ದಾರೆ. `ಮಹಿಳೆಯ ಸೇವಾ ಕ್ಷೇತ್ರಗಳು’ ವಿಷಯದ ಕುರಿತು  ಎವಿಕೆ ಕಾಲೇಜಿನ ಸಹಾಯಕ ಪ್ರಾಧ್ಯಾ ಪಕರಾದ ಶ್ರೀಮತಿ ಕವಿತ ಆರ್.ಜಿ. ಉಪನ್ಯಾಸ ನೀಡುವರು. ಸುದರ್ಶನ್‌,  ತಾಲ್ಲೂಕು ಕಸಾಪ ನಿರ್ದೇಶಕರುಗಳಾದ ಶ್ರೀಮತಿ ಪರಿಮಳ ಜಗದೀಶ್‌, ಷಡಾಕ್ಷರಪ್ಪ ಎಂ. ಬೇತೂರು, ಹಿರಿಯ ನಾಗರಿಕರ ಸಹಾಯವಾಣಿ ನವೀನ್‌ಕು ಮಾರ್‌ ಗೌರವ ಉಪಸ್ಥಿತರಿರುವರು. ತಾಲ್ಲೂಕು ಕಸಾಪ ಅಧ್ಯಕ್ಷರಾದ ಸುಮತಿ ಜಯಪ್ಪ ಪ್ರಾಸ್ತಾವಿಕ ನುಡಿಗಳನ್ನಾಡುವರು.

error: Content is protected !!