ಮಲೇಬೆನ್ನೂರು, ಮಾ.23- ಯಲವಟ್ಟಿ ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸ ವವು ಭಾನುವಾರ ಬೆಳಿಗ್ಗೆ ಗ್ರಾಮಸ್ಥರ ಸಮ್ಮುಖದಲ್ಲಿ ಜಿಗಳಿ ರಂಗನಾಥ ಸ್ವಾಮಿ ಜೊತೆ ಗೂಡಿ ಸಂಭ್ರಮದಿಂದ ಜರುಗಿತು. ರಥೋತ್ಸವದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಶ್ರೀ ಗುರುಸಿದ್ಧಾಶ್ರಮದ ಯೋಗಾನಂದ ಸ್ವಾಮೀಜಿ ಹಾಗೂ ನೆರೆಹೊರೆಯ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿ ದ್ದರು. ಸಂಜೆ ಮುಳ್ಳೋತ್ಸವ ನಡೆಯಿತು. ದೇವರನ್ನು ಹೊತ್ತವರು ಮುಳ್ಳು ತುಳಿದ ಬಳಿಕ ಹರಕೆ ಹೊತ್ತ ಭಕ್ತರು ಮುಳ್ಳು ತುಳಿದು ಭಕ್ತಿ ಸಮರ್ಪಿಸಿದರು. ಸಂಜೆ ಓಕುಳಿ ಮತ್ತು ಭೂತನ ಸೇವೆ ಕಾರ್ಯಕ್ರಮಗಳು ನಡೆದವು.
ಯಲವಟ್ಟಿಯಲ್ಲಿ ಸಂಭ್ರಮದ ರಥೋತ್ಸವ
