ಮಲೇಬೆನ್ನೂರು, ಮಾ. 21- ಯಲವಟ್ಟಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ರಥೋ ತ್ಸವವು ಜಿಗಳಿ ರಂಗನಾಥಸ್ವಾಮಿ ಜೊತೆಗೂಡಿ ನಾಡಿದ್ದು ದಿನಾಂಕ 23ರ ಭಾನುವಾರ ಬೆಳಿಗ್ಗೆ 7 ಗಂಟೆಗೆ ಜರುಗಲಿದೆ.
ನಾಳೆ ಶನಿವಾರ ರಾತ್ರಿ 8.30ಕ್ಕೆ ಮಹಾರಥಕ್ಕೆ ಕಳಸಧಾರಣೆ ಮಾಡಲಾಗುವುದು. ಭಾನುವಾರ ಸಂಜೆ 5 ಗಂಟೆಗೆ ಸ್ವಾಮಿ ಮುಳ್ಳುಗದ್ದಿಗೆ, 6 ಗಂಟೆಗೆ ಓಕಳಿ ಮತ್ತು ಭೂತನ ಸೇವೆ ನಡೆಯಲಿದೆ.