ಗುಬ್ಬಿಗಳ ಸಂತತಿಯನ್ನು ಕಾಪಾಡಬೇಕು

ಗುಬ್ಬಿಗಳ ಸಂತತಿಯನ್ನು ಕಾಪಾಡಬೇಕು

ದಾವಣಗೆರೆ, ಮಾ.21- ಅಳಿದು ಹೋಗುತ್ತಿರುವ ಗುಬ್ಬಿಗಳ ಸಂತತಿ ಕಾಪಾಡುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಸಾಮಾಜಿಕ ಅರಣ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾ ನಾಯಕ್ ತಿಳಿಸಿದರು.

ರೋಟರಿ ಕ್ಲಬ್ ವಿದ್ಯಾನಗರದ ವತಿಯಿಂದ ಮಾಗನೂರು ಬಸಪ್ಪ ಪ್ರೌಢ ಶಾಲೆಯಲ್ಲಿ ಗುರುವಾರ ವಿಶ್ವ ಗುಬ್ಬಚ್ಚಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಪರಿಸರ ಸಮತೋಲನ ಕಾಪಾಡುವಲ್ಲಿ ಜೀವ ಸಂಕುಲದ ಅತಿ ಸಣ್ಣ ಪಕ್ಷಿಯಾದ ಗುಬ್ಬಚ್ಚಿಗಳ ಪಾತ್ರ ಅತೀ ಮಹತ್ವದ್ದು, ಅವುಗಳ ಚಿಲಿ-ಪಿಲಿ ಗಾನವನ್ನು ಮುಂದಿನ ಪೀಳಿಗೆಗಾಗಿ ಉಳಿಸಬೇಕು ಎಂದು ಹೇಳಿದರು.

ಇದೇ ವೇಳೆ ವಿದ್ಯಾನಗರ ರೋಟರಿ ಕ್ಲಬ್ ಅಡಿ ಯಲ್ಲಿ ಮಾಗನೂರು ಬಸಪ್ಪ ಪ್ರೌಢಶಾಲೆಯಲ್ಲಿ ನೂತನ ಇಂಟರಾಕ್ಟ್ ಕ್ಲಬ್ಬನ್ನು ವಿದ್ಯಾನಗರ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಬಿ ಸಂಗಮೇಶ್ವರ ಗೌಡ ಉದ್ಘಾಟಿಸಿದರು.

ಇಂಟರ್ ಆಕ್ಟ್‌ನ ಅಧ್ಯಕ್ಷರಾಗಿ ಯುಕ್ತಾ, ಕಾರ್ಯದರ್ಶಿಯಾಗಿ ಸುಮಾ ಪಾಟೀಲ್ ಅವರನ್ನು ನೇಮಿಸಲಾಯಿತು. ಹೆಚ್ ಎಂ. ಚಂದ್ರಾಚಾರ್ ಪ್ರಾಸ್ತಾವಿಕ ಮಾತನಾಡಿದರು.

ವಿದ್ಯಾ ನಗರ ರೋಟರಿ ಅಧ್ಯಕ್ಷ ಎಸ್.ಎನ್ ಮಳವಳ್ಳಿ, ರೋಟರಿ ಅಸಿಸ್ಟೆಂಟ್ ಗವರ್ನರ್ ಎಂ.ಎನ್ ಬಿಲ್ಲಳ್ಳಿ, ಆಡಳಿತಾಧಿಕಾರಿ ಎಸ್.ಆರ್. ಸಿರಗಂಬಿ, ಕೆ.ಜಿ. ಭಾರತಿ, ಎಂ.ಬಿ ಮೃತ್ಯುಂಜಯಪ್ಪ, ಆರ್‌. ಶೃತಿ, ಮಹೇಶ್ವರಪ್ಪ, ಪ್ರಕಾಶ್, ವೀರಣ್ಣ ಇತರರು ಇದ್ದರು.

error: Content is protected !!