ಹೊನ್ನಾಳಿ, ಮಾ. 21 – ರಂಜಾನ್ ಹಾಗೂ ಯುಗಾದಿ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪೊಲೀಸರು ಹಾಗೂ ಆರ್‌ಎ ಎಫ್ ಅವರಿಂದ ಶುಕ್ರವಾರ ಪಥಸಂಚಲನ ನಡೆಯಿತು. ಹೊನ್ನಾಳಿ ಪೊಲೀಸ್ ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್ ನೇತೃತ್ವದಲ್ಲಿ ನಡೆದ ಪಥಸಂಚಲನದಲ್ಲಿ ಡೆಪ್ಯೂಡೆಂಟ್ ಕಮಾಂಡೆಟ್ ಬಿ.ಸಿ. ರಾಯ್ ಸೇರಿದಂತೆ ಆರ್ಎಎಫ್‌ನ 40 ಸಿಬ್ಬಂದಿಗಳು ಹಾಗೂ ಪೊಲೀಸ್ ಇಲಾಖೆಯ20 ಸಿಬ್ಬಂದಿಗಳು ಇದ್ದರು.
ರಂಜಾನ್ – ಯುಗಾದಿ : ಹೊನ್ನಾಳಿಯಲ್ಲಿ ಪಥ ಸಂಚಲನ
