ನಾಳೆ ಬಾಪೂಜಿ ವಿದ್ಯಾ ಸಂಸ್ಥೆಯಿಂದ ಮಿಸ್- ಪಾರ್ವತಿ ಕಾರ್ಯಕ್ರಮ

ನಾಳೆ ಬಾಪೂಜಿ ವಿದ್ಯಾ ಸಂಸ್ಥೆಯಿಂದ  ಮಿಸ್- ಪಾರ್ವತಿ ಕಾರ್ಯಕ್ರಮ

ದಾವಣಗೆರೆ, ಮಾ. 21 – ಸ್ಥಳೀಯ ಬಾಪೂಜಿ ವಿದ್ಯಾಸಂಸ್ಥೆಯು ನೂತನ ರೀತಿಯಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದೆ. ನಾಡಿದ್ದು ದಿನಾಂಕ  23ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಎಸ್.ಎಸ್.ಎಂ. ಕಲ್ಚರಲ್ ಸೆಂಟರ್‌ನಲ್ಲಿ ಪಾರ್ವತಿ ಹೆಸರಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಬಾಪೂಜಿ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದ್ದಾರೆ. 

ಮಹಿಳೆಯರ ಪ್ರತಿಭೆಯ ಅನಾವರಣಕ್ಕಾಗಿ `ಮಿಸ್ ಪಾರ್ವತಿಗಾಗಿ ಅನೇಕ ಸ್ಪರ್ಧೆಗಳನ್ನು ಮಹಿಳೆಯರಿಗಾಗಿಯೇ ಆಯೋಜನೆ ಮಾಡಲಾಗಿತ್ತು. ಈ ಸ್ಪರ್ಧೆಗಳು ಮಹಿಳೆಯರ ಆಂತರಿಕ ಮತ್ತು ಬೌದ್ಧಿಕ ಮಟ್ಟವನ್ನು (ಆಂತರಿಕ ಸೌಂದರ್ಯ) ಹೆಚ್ಚಿಸುವ ಮೂಲಕ ದೈಹಿಕ ಸಾಮರ್ಥ್ಯವನ್ನು  ಸದೃಢಗೊಳಿಸುವ ನೆಲೆಯಲ್ಲಿ ಆಯೋಜಿಸಲಾಗಿತ್ತು.

ಮಿಸ್ ಪಾರ್ವತಿ ಸ್ಪರ್ಧೆಗಾಗಿ 120ಕ್ಕೂ ಹೆಚ್ಚು ಮಹಿಳೆಯರು ಸ್ಪರ್ಧಿಸಿದ್ದಾರೆ. ಸ್ಪರ್ಧೆಯನ್ನು ಮೂರು ಹಂತದಲ್ಲಿ ನಡೆಸಲಾಗಿದ್ದು ಮೊದಲ ಹಂತದಲ್ಲಿ ಪ್ರಬಂಧ ಸ್ಪರ್ಧೆ, ಎರಡನೇ ಹಂತದಲ್ಲಿ ಆಶು ಭಾಷಣ ಸ್ಪರ್ಧೆ  ಅಂತಿಮ ಹಂತದಲ್ಲಿ ರಾಂಪ್‌ ವಾಕ್ ಸ್ಪರ್ಧೆ ನಡೆಸಿ ಮತ್ತು ಮೌಖಿಕ ಪ್ರಶ್ನೆಗಳನ್ನು ಕೇಳುವ ಮೂಲಕ ಮಿಸ್ ಪಾರ್ವತಿಯನ್ನು ಆಯ್ಕೆ ಮಾಡಲಾಗಿದೆ. ಈ ಸ್ಪರ್ಧೆಯನ್ನು ಮಹಿಳಾ ಸಬಲೀಕರಣ ವಿಚಾರವನ್ನು ಇಟ್ಟುಕೊಂಡು ನಡೆಸಲಾಗಿದೆ.

ಕಲೋತ್ಸವ ಸ್ಪರ್ಧೆಯಲ್ಲಿ ಬೆಂಕಿಗೆ ರಹಿತ
ಆಹಾರ ಸಿದ್ಧತೆ, (ಕುಕ್ಕಿಂಗ್ ವಿಥೌಟ್ ಫೈರ್), ರಂಗೋಲಿ, ಗೀತ ಗಾಯನ (ಏಕವ್ಯಕ್ತಿ), ಸಮೂಹ ಗಾಯನ, ವಾದ್ಯ ಸಹಿತ ಏಕವ್ಯಕ್ತಿ ಗೀತ ಗಾಯನ ಸ್ಪರ್ಧೆಯನ್ನು ನಡೆಸಲಾಯಿತು.

ಕ್ರೀಡೋತ್ಸವ ಸ್ಪರ್ಧೆಯಲ್ಲಿ ಥ್ರೋ ಬಾಲ್, ಸೆಟಲ್ ಬ್ಯಾಡ್ಮಿಂಟನ್, ಚೆಸ್, ಕೇರಮ್ ಸ್ಪರ್ಧೆಯನ್ನು ಆಟ ಆಡಿಸಲಾಯಿತು. ಇದೇ ದಿನಾಂಕ 8 ರಿಂದ 23 ರವರೆಗೂ ಈ ಸ್ಪರ್ಧೆಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು ಎಂದು ಆಯೋಜಕರು ತಿಳಿಸಿದ್ದಾರೆ.

error: Content is protected !!