ಬೋಧನಾ ಪ್ರಕ್ರಿಯೆಯಲ್ಲಿ ಹೊಸ ವಿಧಾನ ಕೂಡಿರಲಿ

ಬೋಧನಾ ಪ್ರಕ್ರಿಯೆಯಲ್ಲಿ ಹೊಸ ವಿಧಾನ ಕೂಡಿರಲಿ

ದಾವಣಗೆರೆ, ಮಾ.21- ಶಿಕ್ಷಕರು ತಮ್ಮ ಬೋಧನಾ ಪ್ರಕ್ರಿಯೆಯಲ್ಲಿ ಹೊಸ-ಹೊಸ ವಿಧಾನ ಹಾಗೂ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕೆಂದು ದಾವಣಗೆರೆ ವಿವಿ ಭೌತಶಾಸ್ತ್ರ ವಿಭಾಗದ ಅಧ್ಯಕ್ಷ ಡಾ.ಕೆ.ಎಂ. ಈಶ್ವರಪ್ಪ ತಿಳಿಸಿದರು.

ನೂತನ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ 2024-25ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರು ವಿದ್ಯಾರ್ಥಿಗಳಿಗೆ ಕೇವಲ ಮಾರ್ಗದರ್ಶಕರಾಗಿರಬೇಕೆಂದ ಅವರು, ಕೃತಕ ಬುದ್ಧಿಮತ್ತೆಯನ್ನು ತರಗತಿಗಳಲ್ಲಿ ಅಳವಡಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ದಾವಣಗೆರೆ ವಿವಿ ಸಿಂಡಿಕೇಟ್‌ ಸದಸ್ಯ ದ್ಯಾಮಪ್ಪ ಮಾತನಾಡಿ, ಶಿಕ್ಷಕರು ಆಧುನಿಕ ಬೋಧನಾ ಪದ್ಧತಿ ರೂಢಿಸಿಕೊಳ್ಳಬೇಕೆಂದ ಅವರು, ಜೀವನದಲ್ಲಿ ಯಶಸ್ಸು ಪಡೆಯಬೇಕೆಂದರೆ ಹೆತ್ತವರನ್ನು ಗೌರವಿಸಬೇಕು ಎಂದರು.

ನೂತನ ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್‌. ಪರಶುರಾಮನಗೌಡ ಮಾತನಾಡಿ, ಶಿಕ್ಷಕ ವೃತ್ತಿಯಲ್ಲಿ ಸಿಗುವ ನೆಮ್ಮದಿ ಬೇರೆ ಹುದ್ದೆಯಲ್ಲಿ ಸಿಗುವುದಿಲ್ಲ. ಉತ್ತಮ ಶಿಕ್ಷಕರಾಗಬೇಕೆಂದರೆ ಅಧ್ಯಯನ ಶೀಲರಾಗಬೇಕು ಎಂದು ಹೇಳಿದರು.

ಈ ವೇಳೆ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಎಸ್‌. ದಿವಾಕರ್‌ ನಾಯ್ಕ್‌, ಸಹಾಯಕ ಪ್ರಾಧ್ಯಾಪಕರಾದ ಟಿ.ಕೆ. ಹೇಮಾವತಿ, ಡಿ. ಮಂಜುಳಾ, ಹೆಚ್‌. ಜ್ಯೋತಿ, ಗೀತಾ ಹಿರೇಮಠ ಮತ್ತು ಪ್ರಶಿಕ್ಷಣಾರ್ಥಿಗಳು ಇದ್ದರು.

error: Content is protected !!