ಶಾಂತ ಯಾವಗಲ್‌ಗೆ `ಅಕ್ಕ’ ಪ್ರಶಸ್ತಿ

ಶಾಂತ ಯಾವಗಲ್‌ಗೆ `ಅಕ್ಕ’ ಪ್ರಶಸ್ತಿ

ದಾವಣಗೆರೆ,ಮಾ.21- ನಗರದ  ಅಕ್ಕಮಹಾದೇವಿ ಸಮಾಜದ ವತಿಯಿಂದ ಪ್ರತಿ ವರ್ಷ  ಕೊಡ ಮಾಡುವ   `ಅಕ್ಕ’ ಪ್ರಶಸ್ತಿಗೆ ಈ ಬಾರಿ  ಶ್ರೀಮತಿ ಶಾಂತಾ ಎಸ್. ಯಾವಗಲ್ ಆಯ್ಕೆಯಾಗಿದ್ದಾರೆ.  

ಶಾಂತಾ  ಅವರು ಸಮಾಜದ  ನೇತ್ರದಾನ ಪ್ರೇರಣಾ ಕಾರ್ಯಕ್ರಮ ಮತ್ತು ವಧು-ವರಾನ್ವೇಷಣೆ ಸಮಿತಿಯಲ್ಲಿ ಕಳೆದ ನಲವತ್ತು ವರ್ಷಗಳಿಂದ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಬರುವ ಏಪ್ರಿಲ್ 12ರಂದು  ನಡೆ ಯುವ ಶ್ರೀ ಅಕ್ಕಮಹಾದೇವಿ ಜಯಂತಿಯಂದು ಪ್ರಶಸ್ತಿ ಪ್ರದಾನ ಮಾಡ ಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಕಂಚಿಕೇರಿ ಸುಶೀಲಮ್ಮ  ತಿಳಿಸಿದ್ದಾರೆ.  

error: Content is protected !!