ದಾವಣಗೆರೆ, ಮಾ.21- ಬ್ಯಾಂಕಿನಲ್ಲಿ ಹೊಸದಾಗಿ ಖಾತೆ ತೆರೆಯುವ ಪ್ರಾರಂಭದಲ್ಲೇ ವಿಮಾ ಪಾಲಿಸಿ ಮಾಡಿಸಿದ್ದ ಗ್ರಾಹಕ, ಆಕಸ್ಮಿಕವಾಗಿ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಖಾತೆದಾರನಿಗೆ ವಿಮಾ ಕಂಪನಿ 10.15 ಲಕ್ಷ ರೂ.ಗಳ ಪರಿಹಾರ ನೀಡಿದೆ.
ನಗರದ ಪಿ.ಬಿ.ರಸ್ತೆ ಶಾಖೆಯ ಕರ್ನಾಟಕ ಬ್ಯಾಂಕಿನಲ್ಲಿ ಎಲ್. ನಾಗರಾಜ್ ವೈಯಕ್ತಿಕ ಖಾತೆ ತೆರೆದಿದ್ದರು. ಖಾತೆ ತೆರೆದ ಪ್ರಾರಂಭದಲ್ಲೇ 369 ರೂ.ಗಳ ಯುನಿವರ್ಸಲ್ ಸೋಂಪೋ ವಿಮೆ ಮಾಡಿಸಿದ್ದರು.
ಗ್ರಾಹಕ ಮೃತ ಪಟ್ಟ ಸುದ್ದಿ ತಿಳಿದ ಬ್ಯಾಂಕಿನ ವ್ಯವಸ್ಥಾಪಕರು, ಬ್ಯಾಂಕಿನ ಜೊತೆ ಒಪ್ಪಂದ ಮಾಡಿಕೊಂಡಿದ್ದ ಯುನಿವರ್ಸಲ್ ಸೋಂಪೋ ಇನ್ಸೂರೆನ್ಸ್ ಕಂಪನಿಯವರಿಗೆ ತಿಳಿಸಿ, ಮೃತನ ಹೆಂಡತಿ ಎಂ. ಅನ್ನಪೂರ್ಣ ಹಾಗೂ ಮೂವರು ಮಕ್ಕಳಿಗೆ ಚೆಕ್ ವಿತರಿಸಿದ್ದಾರೆ.