ಹರಿಹರದಲ್ಲಿನ ಊರಮ್ಮ ಜಾತ್ರೆ ಎತ್ತುಗಳ ಅದ್ಧೂರಿ ಮೆರವಣಿಗೆ

ಹರಿಹರದಲ್ಲಿನ ಊರಮ್ಮ ಜಾತ್ರೆ ಎತ್ತುಗಳ ಅದ್ಧೂರಿ ಮೆರವಣಿಗೆ

ಹರಿಹರ,ಮಾ.20- ನಗರದಲ್ಲಿ ಊರಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಎತ್ತು ಗಳ  ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಜೋಡು ಬಸವೇಶ್ವರ ದೇವಸ್ಥಾನದ ಆವರಣದಿಂದ ಆರಂಭಗೊಂಡ ಮೆರವಣಿಗೆ ಹೊಸಭರಂಪುರ ಬಡಾವಣೆಯ ಶ್ರೀ ಕಸಬಾ ಗ್ರಾಮದೇವತೆ ಊರಮ್ಮ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಮಹಾಮಂಗಳಾರತಿ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವ ಣಿಗೆಯಲ್ಲಿ ಭಾಗವಹಿಸಿದ್ದ ವಿವಿಧ ತಳಿಯ ಎತ್ತು ಗಳಿಗೆ ಮಹಾಮಂಗಳಾರತಿ ನಂತರ ಹತ್ತಿಕಾಳು, ಹಿಂಡಿ, ಬುಸಾ ನೀಡಿ ಬೀಳ್ಕೊಡಲಾಯಿತು.

ಮೆರವಣಿಗೆಯಲ್ಲಿ ಒಂಟಿ ಎತ್ತಿನ ಬೆಲ್ಲದ ಬಂಡಿ, ರಾಣೇಬೆನ್ನೂರು ತಾಲ್ಲೂಕಿನ ಬಸವೇಶ್ವರ ಬ್ಯಾಂಡ್ ಸೆಟ್, ಹಲಗಿ, ಮುಂತಾದ ಕಲಾ ಮೇಳಗಳು ಮೆರವಣಿಗೆಗೆ ಮೆರಗನ್ನು ನೀಡಿದವು, ಕುರಬರ ಬೀದಿಯ ಕನಕ ರಸ್ತೆಯ ಯುವಕರು ಮಜ್ಜಿಗೆ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ನಂದಿಗಾವಿ ಶ್ರೀನಿವಾಸ್,  ಎಂ.ಹೆಚ್. ಚಂದ್ರಶೇಖರ್, ಕೆ.ಬಿ. ರಾಜಶೇಖರ್, ಚೂರಿ ಜಗದೀಶ್, ರಾಘು ಚೌಗಲೆ, ಎಂ. ಚಿದಾನಂದ ಕಂಚಿಕೇರಿ, ಸುರೇಶ್ ಚಂದಾಪೂರ್, ಪಾಲಾಕ್ಷಪ್ಪ, ಪೂಜಾರ್ ರಾಜಶೇಖರ್, ಶೇಖರಗೌಡ, ದೀಟೂರು ವೀರೇಶ್, ಗೌಡ್ರು ಸಂತೋಷ, ಮಜ್ಜಿಗೆ ವೀರಭದ್ರಪ್ಪ, ಹಾವನೂರು ಈರಣ್ಣ, ಕರಿಬಸಪ್ಪ ಕಂಚಿಕೇರಿ, ಕನ್ನಪ್ಪ, ಹೆಚ್.ಎಸ್. ಸುಭಾಷ್, ನೀಲಗುಂದ ಜಗದೀಶ್, ಗುರುಪ್ರಸಾದ್ ಸಿ.ಕೆ., ಶಂಭು ಹಾವನೂರು, ಪೂಜಾರ್ ಹೆಮ್ಮಣ್ಣ, ಸಿದ್ದೇಶ್ ಬೆಣ್ಣೆ, ಹನುಮಂತಪ್ಪ ಬೆಣ್ಣೆ, ಶಂಭುಲಿಂಗಸ್ವಾಮಿ, ತಿಪ್ಪೇಸ್ವಾಮಿ,  ಅಭಿ ಪೂಜಾರ್, ನಿಖಿಲ್ ಪೂಜಾರ್, ದಾವಣಗೆರೆ ರುದ್ರೇಶ್, ಬಾಸಿಂಗದರ ಅಜಯ್, ಅರ್ಚಕರಾದ ಈರಣ್ಣ, ನಾಗರಾಜ್ ಪುನೀತ್ ಹಾಗೂ ಇತರರು ಹಾಜರಿದ್ದರು.

error: Content is protected !!