ಹೊನ್ನಾಳಿ : ಶೀಘ್ರವೇ ಕೃಷಿಕ ಸಮಾಜದ ಸಭೆ

ಹೊನ್ನಾಳಿ : ಶೀಘ್ರವೇ ಕೃಷಿಕ ಸಮಾಜದ ಸಭೆ

ಹೊನ್ನಾಳಿ, ಮಾ.20-  ಶಾಸಕರು ಭಾಗವಹಿಸಿ ರುವ ಅಧಿವೇಶನ ಮುಗಿದ ನಂತರ ದಿನಾಂಕ ನಿಗದಿಗೊಳಿಸಿ, ಅವಳಿ ತಾಲ್ಲೂಕಿನ ಕೃಷಿಕ ಸಮಾಜದ ಸಭೆ ಕರೆದು ಕೃಷಿಕ ಸಮಾಜದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ಕೃಷಿ ಉಪನಿರ್ದೇಶಕ ರೇವಣಸಿದ್ದನ ಗೌಡ ಹೇಳಿದರು.

ಪಟ್ಟಣದ ಕೃಷಿ ಕಚೇರಿಯಲ್ಲಿ ಗುರುವಾರ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕು ನೂತನ ಕೃಷಿಕ ಸಮಾಜದಿಂದ ಆಯ್ಕೆಗೊಂಡ ಮೊದಲ ನಿರ್ದೇಶಕರ ಸಭೆಯಲ್ಲಿ ಸದಸ್ಯರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು.

ಕೃಷಿಕ ಸಮಾಜದ ಪದಾಧಿಕಾರಿಗಳು ಇತರೆಡೆ ನಡೆಯುವ ಕೃಷಿ ಮೇಳ ಹಾಗೂ ಕೃಷಿ ಅಧ್ಯಯನ ಪ್ರವಾಸ ಕೈಗೊಂಡು ನಿಮ್ಮ ವ್ಯಾಪ್ತಿಯ ರೈತರಿಗೆ ಕೃಷಿ ಇಲಾಖೆಯ ಸರ್ಕಾರಿ ಯೋಜನೆಗಳ, ತಿಳಿದು ಇಲಾಖೆಯ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗುವಂತೆ ಕರೆ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಲ್. ರುದ್ರನಾಯ್ಕ್ ಮಾತನಾಡಿ, ಕೃಷಿಕ ಸಮಾಜದ ಕಟ್ಟಡದ ಬೀಗದ ಕೀ ಟಿಎಪಿಸಿಎಂಎಸ್ ನ ಸುಪರ್ದಿಯಲ್ಲಿದ್ದು, ಅದನ್ನು ನಮ್ಮ ಸಂಘದ ಸುಪರ್ದಿಗೆ ಪಡೆದು ಕಟ್ಟಡ ದುರಸ್ತಿಗೊಳಿಸುವ ಅಥವಾ ಸ್ಥಳದಲ್ಲಿ ಹೊಸ ಕಟ್ಟಡ ಕಟ್ಟುವ ಬಗ್ಗೆ ಶಾಸಕರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕಿದೆ ಎಂದರು.

ನ್ಯಾಮತಿ ತಾಲ್ಲೂಕು ಅಧ್ಯಕ್ಷ ಎಂ.ಎಚ್. ಕುಮಾರ್ ಮಾತನಾಡಿ, ನ್ಯಾಮತಿಯ ಕೃಷಿ ಕಟ್ಟಡಕ್ಕೆ ಇವರಿಗೆ ಸ್ವಂತ ನಿವೇಶನ ದೊರೆತಿಲ್ಲ. ಕೃಷಿಕ ಸಮಾಜದ ಯೋಜನೆಗಳ ಅನುಷ್ಠಾನಗೊಳಿಸಲು ಕೃಷಿಕ ಸಮಾಜಕ್ಕೆ ಸ್ವಂತ ಕಟ್ಟಡ ಅತಿ ಅವಶ್ಯಕವಾಗಿದ್ದು, ಇದಕ್ಕೆ ಹೆಚ್ಚು ಆದ್ಯತೆ ನೀಡುವುದಾಗಿ ತಿಳಿಸಿದರು. 

ಸಹಾಯಕ ಕೃಷಿ ನಿರ್ದೇಶಕ ವಿಶ್ವನಾಥ್, ಕೃಷಿಕ ಸಮಾಜದ ಹೊನ್ನಾಳಿ ಉಪಾಧ್ಯಕ್ಷ ಶಿವನಗೌಡ, ನ್ಯಾಮತಿ ಉಪಾಧ್ಯಕ್ಷೆ ಜಯಮ್ಮ, ಜಿಲ್ಲಾ ಪ್ರತಿನಿಧಿಗಳಾದ ಬಸವನಗೌಡ, ಇಂದಿರಾ, ಕೃಷಿ ಅನುವುಗಾರ ನಾಗರಾಜ್ ಕಡೇಮನೆ ಸಭೆಯಲ್ಲಿ ಮಾತನಾಡಿದರು.

ಹೊನ್ನಾಳಿ ನೂತನ ನಿರ್ದೇಶಕರಾದ ಕೃಷ್ಣಮೂರ್ತಿ, ಪಾಲಾಕ್ಷಪ್ಪ, ಲಿಂಗಯ್ಯ, ಸಣ್ಣ ದುರ್ಗಪ್ಪ, ಮಂಜಪ್ಪ, ಹಾಲೇಶಪ್ಪ, ಪುಷ್ಪಲತಾ, ಕುಮಾರ್, ನ್ಯಾಮತಿ ತಾಲೂಕಿನ ಬಿ. ಹೆಚ್. ಉಮೇಶ್ , ಹಾಲೇಶಪ್ಪ, ಸೋಮಶೇಖರ್ ರವಿ, ರಾಮಲಿಂಗಪ್ಪ, ಸುರೇಶ್, ಕಾಂತಪ್ಪ, ಶಾಂತನಾಯ್ಕ್ ಉಪಸ್ಥಿತರಿದ್ದರು.

error: Content is protected !!