ಅಂಗನವಾಡಿ ಕಾರ್ಯಕರ್ತೇಯರ ಫೆಡರೇಷನ್ನಿನ ತಾಲ್ಲೂಕು ಸಮಿತಿಗೆ ಆಯ್ಕೆ

ಅಂಗನವಾಡಿ ಕಾರ್ಯಕರ್ತೇಯರ ಫೆಡರೇಷನ್ನಿನ ತಾಲ್ಲೂಕು ಸಮಿತಿಗೆ ಆಯ್ಕೆ

ದಾವಣಗೆೆರೆ, ಮಾ. 19 – ಎಐಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್‌ನ ದಾವಣಗೆರೆ ತಾಲ್ಲೂಕು ಸಮಿತಿಯ ನೂತನ ಅಧ್ಯಕ್ಷರಾಗಿ ಕೆ.ಸಿ. ನಿರ್ಮಲ, ಕಾರ್ಯದರ್ಶಿಯಾಗಿ ಡಿ. ಗೀತಾ, ಖಜಾಂಚಿಯಾಗಿ ಎಸ್.ಎಮ್. ಸಾಕಮ್ಮ ಆಯ್ಕೆಯಾಗಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಮಲ್ಲಮ್ಮ ತಿಳಿಸಿದ್ದಾರೆ.

ಸ್ಥಳೀಯ ಕಾಂ.  ಪಂಪಾಪತಿ ಭವನದಲ್ಲಿ ಕಳೆದ ವಾರ ನಡೆದ ದಾವಣಗೆರೆ ತಾಲ್ಲೂಕು ಸದಸ್ಯರ ಸಭೆಯಲ್ಲಿ ಸಮಿತಿಗೆ ಕಾರ್ಯಕಾರಿ ಸಮಿತಿ ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. 

ಉಪಾಧ್ಯಕ್ಷರಾಗಿ ಭಾಗ್ಯಲಕ್ಷ್ಮಿ ನಾರಾಯಣ ಮೂರ್ತಿ, ಸಂಘಟನಾ ಕಾರ್ಯದರ್ಶಿಯಾಗಿ ಎಂ.ಆರ್. ಕುಸುಮ, ಸಹ ಕಾರ್ಯದರ್ಶಿಯಾಗಿ ಸುಶೀಲಾ, ತಾಲ್ಲೂಕು ಸಂಚಾಲಕಿಯಾಗಿ ಕೆ.ಆರ್.ಮಮತಾ ಆಯ್ಕೆಯಾಗಿದ್ದಾರೆ. ತಾಲ್ಲೂಕು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಭಾಗ್ಯಲಕ್ಷ್ಮಿ, ಸವಿತಾ, ಮಂಜುಳಾ, ಜ್ಯೋತಿ, ಹೂವಿನಮಡು ರೇಖಾ, ವಂದನಾ, ಅಂಬುಜಾ ಹಾಗೂ ಮಹದೇವಿಪುರ ರತ್ನಮ್ಮ ಆಯ್ಕೆಯಾಗಿದ್ದಾರೆ.

ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ. ರಾಘವೇಂದ್ರ ನಾಯರಿ ಮಾತನಾಡದರು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್‌ನ ಮುಖಂಡರಾದ ಹೆಚ್.ಜಿ. ಮಂಜುಳಾ, ಹೆಚ್. ಗೀತಾ, ಬಿ.ಟಿ. ಮಂಜುಳಾ, ರೇಣುಕಮ್ಮ, ಸಿ.ಪ್ರಮೀಳಾ, ಕೆ.ಎನ್. ರೂಪಕಲಾ, ಹೆಚ್.ಜಿ. ವನಜಾಕ್ಷಮ್ಮ, ಗೌರಮ್ಮ ಹೆಬ್ಬಾಳು, ನಜೀರಾ ಬಾನು, ಚಂದ್ರಕಲಾ, ಮಂಜುಳಾ ಹದಡಿ ಮೊದಲಾದವರು ಸಭೆಯಲ್ಲಿ ಹಾಜರಿದ್ದರು.

error: Content is protected !!