ಹರಪನಹಳ್ಳಿ,ಮಾ.18- ಜೀವನ ಕಟ್ಟಿಕೊಳ್ಳಲು ಪರೀಕ್ಷೆಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಜ್ಞಾನದೀಪ ನವೋದಯ ಕೋಚಿಂಗ್ ಸೆಂಟರ್‌ನ ಸಂಸ್ಥಾಪಕ ನಾಗರಾಜ ಮ್ಯಾಕಿ ತಿಳಿಸಿದರು.
ತಾಲ್ಲೂಕಿನ ಹಲುವಾಗಲು ಗ್ರಾಮದ ಜ್ಞಾನದೀಪ ನವೋದಯ ಕೋಚಿಂಗ್ ಸೆಂಟರ್‌ನಲ್ಲಿ ಒಂಭತ್ತನೇ ತರಗತಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುವ ಸಲುವಾಗಿ ನಡೆಸಿದ ಪೂರ್ವಭಾವಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಅವರು ಮಾತ ನಾಡಿದರು.
ಜೀವನದಲ್ಲಿ ಉತ್ತಮ ವ್ಯಕ್ತಿತ್ವ ರೂಪು ಗೊಳ್ಳಲು ಶಿಕ್ಷಣ ಬೇಕು, ಹಾಗಾಗಿ ಬಾಲ್ಯದ ಜೀವನವು ವಿದ್ಯಾರ್ಥಿಗಳ ಜೀವನದ ಅತ್ಯಂತ ಪ್ರಮುಖ ಘಟ್ಟವಾಗಿದೆ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನೀವುಗಳು ಪ್ರಾಥಮಿಕ ಹಾಗೂ ಪ್ರೌಢಾವಸ್ಥೆ ಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತಿಳಿದುಕೊಂಡರೆ ಭವಿಷ್ಯದ ಕನಸು ಸುಲಭವಾಗಿ ಸಾಕಾರಗೊಳ್ಳಲು ಸಹಕಾರಿಯಾಗುತ್ತದೆ.
ದೇಶವು ಜಗತ್ತಿನಲ್ಲಿ ವೇಗವಾಗಿ ಬೆಳವಣಿಗೆಯಾಗುತ್ತಿದೆ. ಅದಕ್ಕೆ ನಮ್ಮಲ್ಲಿನ ಶಿಕ್ಷಣ ಕ್ರಾಂತಿಯೇ ಕಾರಣ, ಮಧ್ಯಮ ವರ್ಗದ ಜನತೆಯು ಜೀವನ ನಡೆಸಲು, ತಮ್ಮ ಬದುಕಿನಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿಗಳನ್ನು ಎದುರಿಸಿ ನಿಮಗೆ ಶಿಕ್ಷಣ ನೀಡು ತ್ತಾರೆ. ತಂದೆ-ತಾಯಿಗಳು ಪಡುವ ಕಷ್ಟಗಳನ್ನು ನೋಡುತ್ತಾ ಬೆಳೆದ ಮಕ್ಕಳು ಜೀವನದಲ್ಲಿ ಅತ್ಯಂತ ದೊಡ್ಡ ಮಟ್ಟದ ಸಾಧನೆಯನ್ನು ಮಾಡುತ್ತಾರೆ ಎಂದರು.
ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ. ಷಣ್ಮುಖಪ್ಪ ಮಾತನಾಡಿ, ಮಕ್ಕಳು ಶಿಕ್ಷಣಕ್ಕೂ ಮೊದಲು ಗುರುವಿನ ಗುಲಾಮರಾಗಬೇಕಾಗು ತ್ತದೆ, ಆಗ ಮಾತ್ರ ನಮ್ಮ ಬದುಕು ಸಂಸ್ಕಾರ ಯುತವಾಗಿ ಬೆಳಗುತ್ತದೆ. ಇಂದಿನ ಮಕ್ಕಳಲ್ಲಿ ಸಂಸ್ಕಾರದ ಕೊರತೆ ಇದ್ದು ಪೋಷಕರು ಮನೆಯಲ್ಲಿ ಅದನ್ನು ನೀಡಬೇಕು ಎಂದರು.
ಇಂದಿನ ಮಕ್ಕಳು ಅತ್ಯಂತ ಸುಖೀ ಜೀವಿಗಳು ಏಕೆಂದರೆ ಸರ್ಕಾರವು ಇಂದು ಎಲ್ಲಾ ರೀತಿಯ ಸೌಲಭ್ಯಗಳನ್ನು ಶಿಕ್ಷಣದ ಸಲುವಾಗಿ ನೀಡಿದೆ, ಆದರೆ ಕಳೆದ ಎರಡು ದಶಕಗಳ ಹಿಂದೆ ಕಲಿತ ವಿದ್ಯಾರ್ಥಿಗಳು ಅತ್ಯಂತ ಕಷ್ಟದಿಂದ ಶಿಕ್ಷಣ ಪಡೆದರು. ಹಾಗಾಗಿ ಈ ಸಮಯ ಮತ್ತೆ ಸಿಗುವುದಿಲ್ಲ ಇದನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
120 ವಿದ್ಯಾರ್ಥಿಗಳು ಪೂರ್ವಭಾವಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದಿದ್ದು, ಕಾವೇರಿ ಎಚ್ ಪ್ರಥಮ, ಬಿ. ಗಂಗಮ್ಮ ದ್ವಿತೀಯ, ಎನ್ ಆಕಾಶ್ ತೃತೀಯ ಸ್ಥಾನ ಪಡೆದುಕೊಂಡರು.
ಮ್ಯಾಕಿ ಹನುಮವ್ವ ಅಧ್ಯಕ್ಷತೆ ವಹಿಸಿದ್ದರು, ಐಶ್ವರ್ಯ ಕೆ, ಶಿಕ್ಷಕರಾದ ಮಂಜುನಾಥ ಬಿ, ಪರುಸಪ್ಪ ಎನ್. ಶಿವಪ್ಪ, ಕೆ, ಕೆಂಚಪ್ಪ, ನಂದೀಶ್ ಆಚಾರ್, ಕರ್ಣೇಶ್, ಚಂದ್ರುಗೌಡ, ವಿನುತ, ರಾಮಣ್ಣ, ಆರ್. ಆನಂದ, ಬಿ. ಅಂಜಿನಪ್ಪ, ಶಿವಕುಮಾರ್ ಹಾಗೂ ಇತರರಿದ್ದರು.