ಹೊನ್ನಾಳಿ, ಮಾ. 18 – ಪ್ರಸ್ತುತ ದಿನಗಳಲ್ಲಿ ಅಡಿಕೆ ಖೇಣಿದಾರರು ಅನೇಕ ತೊಂದರೆ, ಕೆಲವೊಂದು ಬಾರಿ ನಷ್ಟವನ್ನು ಅನುಭವಿಸುತ್ತಿದ್ದು ಇದಕ್ಕೆಲ್ಲ ಸೂಕ್ತವಾದ ಪರಿಹಾರವನ್ನು ಸಭೆ ಮೂಲಕ ಕಂಡುಕೊಳ್ಳಬೇಕಿದೆ ಎಂದು ತರಗನಳ್ಳಿ ಮುರುಗೇಶ್ ಹೇಳಿದರು.
ಅವರು ಗೊಲ್ಲರಹಳ್ಳಿ ತರಳಬಾಳು ಸಮುದಾಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನ ಖೇಣಿದಾರರ ಸಮಿತಿ ರಚನೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೆಲಹೊನ್ನೆ ಮೋಹನ್ ಮಾತನಾಡಿ, ಒಣ ಅಡಿಕೆ ಗುಣಮಟ್ಟ ಕಾಯ್ದುಕೊಳ್ಳುವ ಗುಣಾತ್ಮಕ ಮಾರುಕಟ್ಟೆ ಸ್ಥಿರತೆ ಬಗ್ಗೆ ನಮ್ಮಲ್ಲಿ ಒಮ್ಮತ ಮೂಡಬೇಕಿದೆ ಎಂದರು.
ಅರಕೆರೆ ಮಧು ಗೌಡ ಮಾತನಾಡಿ, ಖೇಣಿದಾರರ ಪೂರ್ಣ ಪ್ರಮಾಣದ ಸಮಿತಿ ರಚಿಸಲು ಒಂದೆರಡು ತಿಂಗಳಲ್ಲಿ ದೊಡ್ಡ ಮಟ್ಟದ ಸಂಖ್ಯೆಯಲ್ಲಿ ಸಭೆ ಸೇರುವ ಮೂಲಕ ಅಡಿಕೆ ಕೇಳಿದಾರರ ಸೌಹಾರ್ದ ಸಹಕಾರ ಸಂಘವನ್ನು ಸ್ಥಾಪಿಸುವ ಇಚ್ಛೆ ವ್ಯಕ್ತಪಡಿಸಿದರು.
ಶಿವಮೊಗ್ಗ ಲೋಹಿತ್, ಸವಳಂಗ ಕರಿಬಸಪ್ಪ ಗೌಡ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಾಸಡಿ ಗಜೇಂದ್ರಪ್ಪ ಹುಣಸಘಟ್ಟ, ಗದಿಗೆಶ್ ದೊಡ್ಡೇರಿ, ಗಿರೀಶ್ ಚನ್ನಗಿರಿ, ವೀರಭದ್ರಪ್ಪ ಬೆನಕನ ಹಳ್ಳಿ, ಬಸಣ್ಣ, ಶಿವಣ್ಣ, ಕುಂದೂರು ಮಂಜುನಾಥ್, ಹಾಲೇಶ್ ಪಾಟೀಲ್ ಇನ್ನಿತರರಿದ್ದರು.