ರಜತ ಮಹೋತ್ಸವದ ಸಂಭ್ರಮದಲ್ಲಿ ಬಾಪೂಜಿ ಪಾಲಿಟೆಕ್ನಿಕ್‌ ಶ್ಯಾಬನೂರು

ರಜತ ಮಹೋತ್ಸವದ ಸಂಭ್ರಮದಲ್ಲಿ ಬಾಪೂಜಿ ಪಾಲಿಟೆಕ್ನಿಕ್‌ ಶ್ಯಾಬನೂರು

ದಾವಣಗೆರೆ, ಮಾ.18- ನಗರದ ಬಾಪೂಜಿ ಪಾಲಿಟೆಕ್ನಿಕ್‌ ಶ್ಯಾಬನೂರು ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಜತ ಮಹೋತ್ಸವವು ಸಂಭ್ರಮದಿಂದ ನಡೆಯಿತು.

ಕಾಲೇಜು 1985ರಲ್ಲಿ ಪ್ರಾರಂಭವಾದಾಗ ಸಿವಿಲ್‌ ಹಾಗೂ ಮೆಕ್ಯಾನಿಕಲ್‌ ವಿಭಾಗವಷ್ಟೇ ಇತ್ತು. ಆದರೀಗ ಒಟ್ಟು 7 ಇಂಜಿನಿಯರಿಂಗ್ ಡಿಪ್ಲೋಮಾ ವಿಭಾಗಗಳಲ್ಲಿ ತಾಂತ್ರಿಕ ಶಿಕ್ಷಣ ನೀಡುತ್ತಿದೆ ಎಂದು ಕಾಲೇಜಿನ ಡಾ.ಎಂ.ಜಿ. ಸುರೇಶ್ ತಿಳಿಸಿದರು.

ಈ ವೇಳೆ ಹೆಕ್ಸಿಟ್ರಾನಿಕ್ಸ್ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಕಿರಣ್ ಎಸ್. ಕುಲಕರ್ಣಿ, ಪ್ರಾಚಾರ್ಯೆ ಪುಷ್ಪಲತಾ ನಾಡಿಗ್, ಪ್ರೊ.ವೈ. ವೃಷಭೇಂದ್ರಪ್ಪ, ಸಂಯೋಜಕಿ ಕೆ. ನಾಗರತ್ನ, ಕಾಲೇಜಿನ ಸಿಬ್ಬಂದಿ ಹಾಗೂ ಇತರರು ಇದ್ದರು.

error: Content is protected !!