ಕಟ್ಟಡ ಅಲಂಕಾರಿಕವಾಗಿ ಕಾಣಬೇಕೆಂದರೆ, ಪರಿಣಿತಿ ಪಡೆದ ಫ್ಲಂಬರ್‍ನಿಂದ ಮಾತ್ರ ಸಾಧ್ಯ

ಕಟ್ಟಡ ಅಲಂಕಾರಿಕವಾಗಿ ಕಾಣಬೇಕೆಂದರೆ,  ಪರಿಣಿತಿ ಪಡೆದ ಫ್ಲಂಬರ್‍ನಿಂದ ಮಾತ್ರ ಸಾಧ್ಯ

ವಿಶ್ವ ಪ್ಲಂಬರ್ ದಿನಾಚರಣೆಯಲ್ಲಿ ಕಾವೇರಿ ಮಾತಾ ಪ್ಲಂಬರ್ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಡಿ. ಶೆಟ್ಟರ್

ದಾವಣಗೆರೆ, ಮಾ. 20 – ಕುಡಿಯುವ ನೀರಾಗಲೀ, ಒಳ ಚರಂಡಿ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಮೂಲಕ ಯಾವುದೇ ಕಟ್ಟಡವನ್ನು ಅಲಂಕಾರಿಕವಾಗಿ ಕಾಣಬೇಕೆಂದರೆ, ಪರಿಣಿತಿ ಪಡೆದ ಫ್ಲಂಬರ್‍ನಿಂದ ಮಾತ್ರ ಸಾಧ್ಯ. ಮಾತ್ರವಲ್ಲದೆ, ಅವುಗಳ ನಿರ್ವಹಣೆಯ ಪರಿಣಿತಿ ಹೊಂದಿದ್ದರೆ ಮಾತ್ರ ಆತ ಪರಿಪೂರ್ಣ ಫ್ಲಂಬರ್ ಆಗಲಿದ್ದಾನೆ ಎಂದು ಕಾವೇರಿ ಮಾತಾ ಪ್ಲಂಬರ್ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಡಿ. ಶೆಟ್ಟರ್ ತಿಳಿಸಿದರು.

ಮಂಗಳವಾರ ವಿಶ್ವ ಪ್ಲಂಬರ್ ದಿನಾಚರಣೆಯ ಪ್ರಯುಕ್ತ ನಗರದ ಬಾಡಾ ಕ್ರಾಸ್‌ನಲ್ಲಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಲಿಂಗೈಕ್ಯ ಡಾ. ಪುಟ್ಟರಾಜ ಗವಾಯಿಗಳವರ  ಗದ್ದಿಗೆ ಪೂಜೆ ಮಾಡುವುದರ ಜೊತೆಗೆ ಇರುವ ಮಕ್ಕಳಿಗೆ ಬೆಳಗಿನ ಉಪಹಾರದೊಂದಿಗೆ ಆಚರಣೆ ಮಾಡಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಫ್ಲಂಬರ್ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸವಲತ್ತು ಪಡೆಯಲು ಫ್ಲಂಬರ್‍ಗಳು ಸೇರಿದಂತೆ ಕಾರ್ಮಿಕರ ಗುರುತಿನ ಚೀಟಿ ಮಾಡಿಸುವುದು. ಅವರ ಮಕ್ಕಳ ವಿಧ್ಯಾಭ್ಯಾಸಕ್ಕೆ, ಮದುವೆಯ ಧನ ಸಹಾಯ ಕೊಡಿಸುವುದು. ಮೃತ ಪಟ್ಟಂತ ಕಾರ್ಮಿಕರಿಗೆ ಅನುಗ್ರಹ ರಾಶಿ ಅಡಿಯಲ್ಲಿ ಬರುವ 75 ಸಾವಿರ, 60 ವರ್ಷ ಪೂರೈಸಿದ ಹಿರಿಯ ಪ್ಲಂಬರ್‍ಗಳನ್ನು ಗುರುತಿಸಿ ನಿವೃತ್ತಿ ವೇತನವನ್ನು ಕೊಡಿಸುವುದು ಮತ್ತು ವೈದ್ಯಕೀಯ ಚಿಕಿತ್ಸೆಯ ಸೌಲಭ್ಯಗಳನ್ನು ಕೊಡಿಸುವುದು ಇನ್ನು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾ ಬರಲಾಗಿದೆ ಎಂದು ತಿಳಿಸಿದರು.

ಈ ವೇಳೆ ಕಾವೇರಿ ಮಾತಾ ಪ್ಲಂಬರ್ ಕಾರ್ಮಿಕರ ಸಂಘದ ಅಧ್ಯಕ್ಷ ಎಸ್.ಬಿ. ರುದ್ರೇಶ್ ಉಪಾಧ್ಯಕ್ಷ ಎಸ್.ಎಂ. ಸಿದ್ದಲಿಂಗಪ್ಪ, ಎಸ್. ರಾಜು, ಖಜಾಂಚಿ ಕೆ.ಜಿ.ಡಿ. ಬಸವರಾಜ್, ಕಾರ್ಯದರ್ಶಿ,  ಎಸ್. ಹೊಳೆಬಸಪ್ಪ,  ಸಹ ಕಾರ್ಯದರ್ಶಿ ಎಚ್.ಆರ್. ಬಸವರಾಜ್, ಸಂಘಟನಾ ಕಾರ್ಯದರ್ಶಿ ಅಣ್ಣಪ್ಪ, ರಂಗಸ್ವಾಮಿ, ನಿರ್ದೇಶಕ ಪಿ. ಅಶೋಕ್, ವೀರೇಶ್ ಮುತ್ತಿಗೆ, ಗಾಳಪ್ಪ, ಎಸ್.ಚಂದ್ರಶೇಖರ್, ಐ.ಎಂ. ಗಿರೀಶ್, ಅನಿಲ್, ಶಿವು, ಪ್ರಶಾಂತ್, ಎಸ್.ಗೋವಿಂದ್ ರಾಜ್, ಎಸ್. ಕೆಂಗಪ್ಪ, ಬಿ. ಮೋಹನ್, ಪ್ರತಾಪ್, ಕರಿಬಸಯ್ಯ, ಶಿವಪ್ರಕಾಶ್ ಸ್ವಾಮಿ ಇತರರಿದ್ದರು.

error: Content is protected !!