ಹರಿಹರ, ಮಾ. 20 – ಅಶ್ವಿನಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ (ದಾವಣಗೆರೆ) ಹಾಗೂ ಎನ್ಎಸ್ಎಸ್ ಘಟಕ ಸರ್ಕಾರಿ ಪಾಲಿ ಟೆಕ್ನಿಕ್ (ಹರಿಹರ) ಇವರ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಹದಿಹರೆಯದ ಸಮಸ್ಯೆಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಹರಿಹರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಕಾಶ್ ಬಿ, ಪ್ರಾಂಶುಪಾಲರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಮುಕ್ತಾ ಎಂ.ಹೆಚ್ ಆಯುರ್ವೇದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು ಮತ್ತು ಡಾ. ಜ್ಞಾನೇಶ್ವರ್ ಎಲ್.ಎಂ. ಪ್ರೊಫೆಸರ್ ಜೀವನ ಶೈಲಿಯ ಬಗ್ಗೆ ಮಾಹಿತಿ ನೀಡಿದರು.
ಡಾ. ಕಾವ್ಯ ಟಿ.ಜಿ. ಹದಿ ಹರೆಯದ ಸಮಸ್ಯೆಗಳ ಬಗ್ಗೆ ಉಪನ್ಯಾಸ ನೀಡಿದರು ಹಾಗೂ ಉಚಿತ ವೈದ್ಯಕೀಯ ತಪಾಸಣೆ ಶಿಬಿರವನ್ನು ಡಾ. ವಿರೂಪಾಕ್ಷಯ್ಯ ಸ್ವಾಮಿ ಹಿರೇಮಠ, ಡಾ. ಪವನ್ ಕುಮಾರ್ ಡಾ. ಪ್ರಿಯಾಂಕ ಮತ್ತು ಡಾ. ಶಶಿಧರ್ ನಡೆಸಿಕೊಟ್ಟರು.