ದಾವಣಗೆರೆ, ಮಾ.18- ನಗರದ ಹದಡಿ ರಸ್ತೆಯ ಸೋಮೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಂಭಾಗ ಸಂಪೂರ್ಣ ಒಣಗಿದ ಮರವೊಂದು ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.
ರಸ್ತೆಯ ಮಧ್ಯಭಾಗದಲ್ಲಿ ಒಣಗಿ ನಿಂತಿರುವ ಮರವು ಜೋರಾದ ಗಾಳಿ-ಮಳೆ ಬೀಸಿದರೇ ಸಾಕು ಧರೆಗೆ ಉರುಳಲು ಕಾಯುತ್ತಿದೆ.
ರಸ್ತೆಯಲ್ಲಿ ದಿನ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಓಡಾ ಡುತ್ತವೆ. ಆಸ್ಪತ್ರೆ ಅಲ್ಲೇ ಇರುವುದರಿಂದ ಜನ ದಟ್ಟನೆ ಇರುತ್ತದೆ. ಹಾಗಾಗಿ ಅನಾಹುತ ಸಂಭವಿಸುವ ಮೊದಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಒಂದಿಲ್ಲೊಂದು ದಿನ ಜನರ ಪ್ರಾಣಕ್ಕೆ ಕುತ್ತಾಗಿರುವ ಮರ ತೆರವು ಗೊಳಿಸುವಂತೆ ಸ್ಥಳೀಯ ನಿವಾಸಿಗಳು ಅನೇಕ ಬಾರಿ ಪಾಲಿಕೆಗೆ ಮಾಹಿತಿ ನೀಡಿ ದರೂ ಸಹ ಅಧಿಕಾರಿ ಮೌನವಹಿಸಿದ್ದಾರೆ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಒಣಗಿದ ಮರದಿಂದ ಸಾರ್ವಜನಿಕರಿಗೆ ತೊಂದರೆ ಆಗುವ ಮೊದಲೇ ಪಾಲಿಕೆ, ಅರಣ್ಯ ಇಲಾಖೆ ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸಿದ್ದಾರೆ.