ಸ್ವಾತಿ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಬುರಡಿಕಟ್ಟಿ ಒತ್ತಾಯ

ಸ್ವಾತಿ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಬುರಡಿಕಟ್ಟಿ ಒತ್ತಾಯ

ರಾಣೇಬೆನ್ನೂರು, ಮಾ. 18 – ಓರ್ವ ಮತಾಂಧ ಹಾಗೂ ಇಬ್ಬರು ಕಾಮುಕರು ಸೇರಿ ಹಿಂದೂ ಸನಾತನ ಧರ್ಮದ ಪ್ರತಿಪಾದಕಿ, ಸಹೋದರಿ ರಟ್ಟಿಹಳ್ಳಿಯ ಸ್ವಾತಿ ಬ್ಯಾಡಗಿ ಅವಳ ಹತ್ಯೆ ಮಾಡಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಸ್ವಾತಿಗೆ ನ್ಯಾಯ ದೊರಕಿಸುವುದರ ಜೊತೆಗೆ ಸಮಾಜ ದ್ರೋಹಿಗಳಿಗೆ ಎಚ್ಚರಿಕೆ ನೀಡುವಂತಾಗಬೇಕು ಎಂದು ರಾಣೇಬೆನ್ನೂರು ನಗರಸಭೆ ಸದಸ್ಯ ಪ್ರಕಾಶ್‌ ಬುರಡಿಕಟ್ಟಿ ಮನವಿ ಮಾಡಿದ್ದಾರೆ.

ನಗರದ ಮಕ್ಕಳ ತಜ್ಞ ಖನ್ನೂರ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಸಹೋದರಿ ಸ್ವಾತಿ ಅವರು,  ಹಿಂದೂ ಪರ ಸಂಘಟನೆಗಳಲ್ಲಿ ಭಾಗವಹಿಸುತ್ತಿದ್ದುದೇ ಅವಳ ಹತ್ಯೆಗೆ ಕಾರಣವಾಗಿದ್ದು, ಈ ಬಗ್ಗೆ ಕೂಲಂಕುಶ ತನಿಖೆ ನಡೆದು ಅವಳ ಕುಟುಂಬಕ್ಕೆ ನ್ಯಾಯ ದೊರಕಿಸಬೇಕಿದೆ. ಆ ದಿಶೆಯಲ್ಲಿ ತಾವು ಹೋರಾಟ ನಡೆಸುವುದಾಗಿ ಪ್ರಕಾಶ ತಿಳಿಸಿದ್ದಾರೆ.

ಈಗಾಗಲೇ ಈ ಹತ್ಯೆಗೆ ಸಂಬಂಧಿಸಿದಂತೆ ನಯಾಜ್‌, ದುರ್ಗಾಚಾರಿ ಹಾಗೂ ವಿನಾಯಕ ಎಂಬುವವರನ್ನು ಬಂಧಿಸಿದ್ದು, ಯಾವುದೇ ಒತ್ತಡಕ್ಕೆ ಮಣಿಯದೇ ಆರೋಪಿಗಳಿಗೆ ರಕ್ಷಣೆ ಕೊಡದೇ ಅನ್ಯಾಯಕ್ಕೊಳಗಾದ ಕುಟುಂಬಕ್ಕೆ ನ್ಯಾಯ ದೊರಕಿಸುವ ರೀತಿಯಲ್ಲಿ ಪೊಲೀಸರು ಕಾರ್ಯ ನಿರ್ವಹಿಸಬೇಕು ಎಂದು ಪ್ರಕಾಶ್‌ ಬುರಡಿಕಟ್ಟಿ  ಒತ್ತಾಯಿಸಿದ್ದಾರೆ.

error: Content is protected !!