ದಾವಣಗೆರೆ, ಮಾ. 18- ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ಬಿನ ಆಟಗಾರ ವಿಷ್ಣು ಎನ್.ಎಂ. ಬಾಸ್ಕೆಟ್ ಬಾಲ್ ಫೆಡರೇಶನ್ ಆಫ್ ಇಂಡಿಯಾ ಹಾಗೂ ಅಸ್ಸಾಂ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಇಂದಿನಿಂದ ಇದೇ ದಿನಾಂಕ 24ರವರೆಗೆ ಗೌಹಾತಿಯಲ್ಲಿ ನಡೆಯಲಿರುವ ಮೊದಲ ರಾಷ್ಟ್ರಮಟ್ಟದ 23 ವರ್ಷದ ಅಡಿಯಲ್ಲಿ ಬಾಸ್ಕೆಟ್ ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ವಿಷ್ಣು, ನಾಗಪ್ಪ ಮಂಟಗಣಿ, ಶ್ರೀಮತಿ ಸುಧಾ ಮಂಟಗಣಿ ಪುತ್ರ. ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ಬಿನ ಗೌರವ ಅಧ್ಯಕ್ಷರಾದ ರಾಮಮೂರ್ತಿ ಸಿ., ಅಧ್ಯಕ್ಷ ಕಿರಣ್ ಕುಮಾರ್ ಆರ್., ಉಪಾಧ್ಯಕ್ಷ ಗಡಿಗುಡಾಳ್ ಮಂಜುನಾಥ್, ವಿಜಯ್ ಕುಮಾರ್, ಕಾರ್ಯದರ್ಶಿ ವೀರೇಶ್ ಆರ್., ಸಹ ಕಾರ್ಯದರ್ಶಿ ಉದಯ್ ಸ್ವಾಮಿ, ಖಜಾಂಚಿ ಪ್ರಸನ್ನ ಕುಮಾರ್, ತರಬೇತಿದಾರ ದರ್ಶನ್ ಆರ್. ಹಾಗೂ ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ಬಿನ ಎಲ್ಲಾ ಸದಸ್ಯರು ಶುಭ ಕೋರಿದ್ದಾರೆ.