ಅಪ್ರಾಪ್ತರಿಗೆ ಬಳಿ ವಾಹನ ನೀಡಿದ ಮಾಲೀಕರಿಗೆ 25 ಸಾವಿರ ದಂಡ

ಅಪ್ರಾಪ್ತರಿಗೆ ಬಳಿ ವಾಹನ ನೀಡಿದ ಮಾಲೀಕರಿಗೆ 25 ಸಾವಿರ ದಂಡ

ದಾವಣಗೆರೆ, ಮಾ.16- ಬಾಲಕ ವಾಹನ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನ ಮಾಲೀಕರಿಗೆ 25 ಸಾವಿರ ದಂಡ, 1 ವರ್ಷ ವಾಹನ ನೋಂದಣಿ ರದ್ದು ಹಾಗೂ ಬಾಲಕನಿಗೆ 25 ವರ್ಷದವರೆಗೂ ಚಾಲನಾ ಪರವಾನಿಗೆ ನೀಡದಂತೆ 3ನೇ ಪಿಆರ್‌ಎಲ್‌ಸಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ತೀರ್ಪು ನೀಡಿದೆ.

ಕೆಟಿಜೆ ನಗರ ಠಾಣೆಯ ಪಿಐ ಹೆಚ್‌.ಎಸ್‌. ಸುನೀಲ್‌ ಕುಮಾರ್‌ ಮತ್ತು ಸಿಬ್ಬಂದಿ ನಗರದ ಕೆ.ಬಿ. ಬಡಾವಣೆಯ ಮುಖ್ಯ ರಸ್ತೆಯಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆ ವೇಳೆ ಬಾಲಕನೋರ್ವ ಸ್ಕೂಟಿ ಚಲಾಯಿಸಿಕೊಂಡು ಬಂದಿರುವುದು ಬೆಳಕಿಗೆ ಬಂದಿದೆ.

ವಾಹನ ಜಪ್ತಿ ಮಾಡಿದ ಪೊಲೀಸರು ಕೆಟಿಜೆ ನಗರ ಠಾಣೆಯಲ್ಲಿ ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ ಅಡಿ ಪ್ರಕರಣ ದಾಖಲಿಸಿ, ಮಾಲೀಕರ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಈ ಕುರಿತು ನ್ಯಾಯಾಧೀಶರು ಬಾಲಕನಿಗೆ ಹಾಗೂ ವಾಹನ ಮಾಲೀಕನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ ಮತ್ತು ಅಪ್ರಾಪ್ತರ ಬಳಿ ವಾಹನ ನೀಡದಂತೆ ಎಚ್ಚರಿಕೆಯನ್ನೂ ನೀಡಿದ್ದಾರೆ.

error: Content is protected !!