ದಾವಣಗೆರೆ, ಮಾ. 16 – ನಗರದ ಚಿನ್ನ ಬೆಳ್ಳಿ ಉದ್ಯಮಿ ಹಾಗೂ ಸಮಾಜ ಸೇವಕ ವಾಸುದೇವ ರಾಯ್ಕರ್ ಅವರಿಗೆ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ರಾಯರ ಮಠದಲ್ಲಿ ಕಳೆದ ವಾರ ನಡೆದ ಸಮಾರಂಭದಲ್ಲಿ ರಾಯರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು `ಶ್ರೀ ಮಂತ್ರಾಲಯಂ ಪರಿಮಳ ಪ್ರಶಸ್ತಿ’ ನೀಡಿ ಗೌರವಿಸಿದರು.
ಮಂತ್ರಾಲಯದಲ್ಲಿ ನಡೆದ ರಾಯರ ವರ್ಧಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ವಾಸುದೇವ ರಾಯ್ಕರ್ ಅವರೂ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ ಶ್ರೀ ಮಠದಿಂದ ಈ ಪ್ರಶಸ್ತಿ ನೀಡಲಾಯಿತು.