ದಾವಣಗೆರೆ, ಮಾ. 18- ಜಿಲ್ಲಾ ಚಿಟ್‌ಸ್ಟರ್ಸ್ ಸಂಘದ ಅಧ್ಯಕ್ಷರಾಗಿ ಅಂದನೂರು ರಾಜೇಶ್ (ಅಂದನೂರು ಚಿಟ್ಸ್) ಕಾರ್ಯದರ್ಶಿಯಾಗಿ ಪಿ. ರವಿ (ಕೆಪಿಆರ್ ಶ್ರೀರಕ್ಷಾ ಚಿಟ್ಸ್) ಖಜಾಂಚಿಯಾಗಿ ಮಲ್ಲಿಕಾರ್ಜುನ ಸ್ವಾಮಿ (ಶ್ರೀ ಗುರು ಚಿಟ್ ಫಂಡ್ಸ್) ಆಯ್ಕೆಯಾಗಿದ್ದಾರೆ.
ಸಂಘದ ಕಛೇರಿ (ಅಂದನೂರು ಚಿಟ್ಸ್) ಸಭಾಂಗಣದಲ್ಲಿ ನಿನ್ನೆ ನಡೆದ ಸಂಘದ ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ಅವಿರೋಧವಾಗಿ ಪುನರ್ ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಬಿ. ಸತ್ಯನಾರಾಯಣ ಮೂರ್ತಿ (ನವೋದಯ ಚಿಟ್ ಫಂಡ್ಸ್), ಉಪಾಧ್ಯಕ್ಷರಾಗಿ ಷಣ್ಮುಖ ರಾಜು ಗುಜ್ಜರ್ (ಶ್ರೀ ಮಾರುತಿ ಚಿಟ್ ಫಂಡ್ಸ್), ಸಹ ಕಾರ್ಯದರ್ಶಿಯಾಗಿ ಅಗಡಿ ಸಿದ್ದೇಶ್ (ಶ್ರೀನಿವಾಸ ಚಿಟ್ ಫಂಡ್ಸ್) ಆಯ್ಕೆಯಾಗಿದ್ದಾರೆ.
ಎಂ. ರಂಗರಾವ್ (ಭಾಗ್ಯರಂಗ ಚಿಟ್ಸ್ ಪ್ರೈ. ಲಿ.,) ರೆಡ್ಡಯ್ಯ (ಚಿನ್ನು) (ಶ್ರೀ ವಾಸವಾಂಬ ಚಿಟ್ ಫಂಡ್ಸ್), ಎ. ಪದ್ಮರಾಜು (ಶ್ರೀ ರಾಘವೇಂದ್ರ ಚಿಟ್ ಫಂಡ್ಸ್), ಎಂ.ಎ. ನವೀನ್ ಜೈನ್ (ಶ್ರೀ ಕ್ಷೇತ್ರಪಾಲ್ ಚಿಟ್ಸ್), ಎಂ.ಬಿ. ಸಿದ್ದಯ್ಯ (ಶ್ರೀ ಸಿದ್ದೇಶ್ವರ ಚಿಟ್ಸ್), ಎಂ.ಜಿ. ಹರೀಶ್ (ಹೆಚ್‌ಪಿಎಸ್ಎಸ್ ಚಿಟ್ಸ್ ಪ್ರೈ. ಲಿ., ನಲ್ಲೂರು) ನಿರ್ದೇಶಕರುಗಳಾಗಿದ್ದಾರೆ.