ಗುಣಶ್ರೀಗೆ ಅಸಾಧಾರಣ ಪ್ರತಿಭೆ ಪ್ರಶಸ್ತಿ

ಗುಣಶ್ರೀಗೆ ಅಸಾಧಾರಣ ಪ್ರತಿಭೆ ಪ್ರಶಸ್ತಿ

ದಾವಣಗೆರೆ, ಮಾ. 18- ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕೊಡ ಮಾಡುವ  ಜಿಲ್ಲಾ ಮಟ್ಟದ 2024-25ನೇ ಸಾಲಿನ ಅಸಾಧಾರಣ ಪ್ರತಿಭೆ ಪ್ರಶಸ್ತಿಗೆ ನಗರದ ಕು. ಎಂ.ವಿ. ಗುಣಶ್ರೀ ಭಾಜನರಾಗಿದ್ದಾರೆ.

ಸಾಂಸ್ಕೃತಿಕ, ಕಲೆ, ಸಂಗೀತ ಕ್ಷೇತ್ರದಲ್ಲಿ ಸಾಧಿಸಿರುವ ಸಾಧನೆಯನ್ನು ಪರಿಗಣಿಸಿ, ಈ ಪ್ರಶಸ್ತಿಯನ್ನು ನೀಡಲಾಗಿದ್ದು, ಪ್ರಶಸ್ತಿಯು 10 ಸಾವಿರ ರೂ. ನಗದು, ಫಲಕವನ್ನೊಳಗೊಂಡಿದೆ. ಗುಣಶ್ರೀ, ಎ.ವಿ. ಕಮಲಮ್ಮ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದು, ಮಹಾನಗರ ಪಾಲಿಕೆ ಮಾಜಿ ಮಹಾಪೌರರು, ನಾಮದೇವ ಸಿಂಪಿ ಸಮಾಜದ ಅಧ್ಯಕ್ಷರೂ ಆದ  ಎಂ.ಎಸ್. ವಿಠಲ್ ಮತ್ತು ಶ್ರೀಮತಿ ನಿರ್ಮಲಾ ದಂಪತಿ ಪುತ್ರಿ.

error: Content is protected !!