ಮಲೇಬೆನ್ನೂರು ಸಮೀಪದ ಕುಂಬಳೂರು ಗ್ರಾಮದ ಶ್ರೀ ಹನುಮಂತ ದೇವರ ಬ್ರಹ್ಮ ರಥೋತ್ಸವವು ಇಂದು ಮಧ್ಯಾಹ್ನ 3 ಗಂಟೆಗೆ ಜರುಗಲಿದೆ.
ಬೆಳಿಗ್ಗೆ 8.30ಕ್ಕೆ ಆನೆ ಉತ್ಸವ, ಮಧ್ಯಾಹ್ನ 12ಕ್ಕೆ ಹರಿಸೇವೆ, ವಿವಿಧ ಹರಕೆಗಳು ನಡೆಯಲಿವೆ. ನಾಳೆ ಭಾನುವಾರ ಬೆಳಗಿನ ಜಾವ 5 ಗಂಟೆಗೆ ಸ್ವಾಮಿಯ `ಮಹಾರಥೋತ್ಸವವು’ ನಿಟ್ಟೂರು ಶ್ರೀ ಹನುಮಂತ ದೇವರ ಮತ್ತು ಗ್ರಾಮದ ಶ್ರೀ ಬಸವೇಶ್ವರ, ಶ್ರೀ ಬೀರಲಿಂಗೇಶ್ವರ ದೇವರುಗಳೊಡಗೂಡಿ ನಡೆಯಲಿದೆ.
ಬೆಳಿಗ್ಗೆ 10ಕ್ಕೆ ಶ್ರೀ ಸ್ವಾಮಿಯು ಬೇಟೆ ಆಡಿ ಬರುವುದಕ್ಕೆ ಹೋಗುವುದು, ನಂತರ 11 ಗಂಟೆಗೆ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಲಾಗಿದ್ದು, ಇಡೀ ದಿನ ಅನ್ನ ಸಂತರ್ಪಣೆ ನಡೆಯಲಿದೆ. ಸಾಯಂಕಾಲ 4ಕ್ಕೆ ಮುಳ್ಳೋತ್ಸವ ಜರುಗಲಿದ್ದು, ರಾತ್ರಿ 9 ಕ್ಕೆ ಕಂಕಣ ವಿಸರ್ಜನೆ ಬಳಿಕ ಓಕುಳಿ, ಭೂತಗಳ ಮಣೇವು ಸೇವೆಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.