ಪಾಲಿಕೆಯ ಪಾಲಾನಾಯ್ಕ ಲೋಕಾಯುಕ್ತ ಬಲೆಗೆ

ಪಾಲಿಕೆಯ ಪಾಲಾನಾಯ್ಕ  ಲೋಕಾಯುಕ್ತ ಬಲೆಗೆ

ದಾವಣಗೆರೆ, ಮಾ.14-ಮಹಾನಗರ ಪಾಲಿಕೆ ವಲಯ ಕಚೇರಿ-2ರ ಪ್ರಥಮ ದರ್ಜೆ ಸಹಾಯಕ ಜಿ. ಪಾಲಾನಾಯ್ಕ ಅವರನ್ನು ಶುಕ್ರವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

30ನೇ ವಾರ್ಡ್‌ನ ಆವರಗೆರೆ ಸಮೀಪದ ಬಾಡಾ ಕ್ರಾಸ್‌ನಲ್ಲಿ (ಮೋತಿ ನಗರ) ಖಾಲಿ ನಿವೇಶನವನ್ನು ತಮ್ಮ ಸಹೋದರಿ ಜಿ.ಯು. ಕಾವ್ಯ ಅವರಿಗೆ ಖಾತೆ ಬದಲಾವಣೆಗೆ ಜಿ.ಯು. ಬಸವನಗೌಡ ಎಂಬುವರು ಪಾಲಿಕೆ ವಲಯ ಕಚೇರಿ-2ರಲ್ಲಿ ಅರ್ಜಿ ಸಲ್ಲಿಸಿದ್ದರು.

ಖಾತೆ ಬದಲಾವಣೆ ಮಾಡಿಕೊಡಲು   ಪಾಲಾನಾಯ್ಕ 2,500 ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ, ಬಸವನಗೌಡ ಜಿಲ್ಲಾ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದರು.

2023ರ ಏಪ್ರಿಲ್ ತಿಂಗಳಲ್ಲಿ ಇದೇ ಪಾಲಾನಾಯ್ಕನನ್ನು ಕರ್ತವ್ಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ಉದ್ದೇಶಪೂರ್ವಕವಾಗಿ ಮೂಲ ಖಾತೆದಾರರಿಗೆ ಮೋಸ ಮಾಡಿ ಆಸ್ತಿ ಮಾಲೀಕರಲ್ಲದವರಿಗೆ ಆಸ್ತಿ ಹಕ್ಕು ವರ್ಗಾವಣೆ ಮಾಡಿರುವ ಹಿನ್ನೆಲೆಯಲ್ಲಿ ಆಯುಕ್ತರಾದ ರೇಣುಕಾ ಅಮಾನತ್ತುಗೊಳಿಸಿದ್ದರು.

error: Content is protected !!