ತರಗನಹಳ್ಳಿಯಲ್ಲಿ ವೈಭವದ ಶ್ರೀ ಬಸವೇಶ್ವರ ರಥೋತ್ಸವ

ತರಗನಹಳ್ಳಿಯಲ್ಲಿ ವೈಭವದ ಶ್ರೀ ಬಸವೇಶ್ವರ ರಥೋತ್ಸವ

ಹೊನ್ನಾಳಿ, ಮಾ.11- ತಾಲ್ಲೂಕಿನ ತರಗನಹಳ್ಳಿ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ನಡೆಯಿತು. 

ಮಂಗಳವಾರ ಹೂ, ಹಣ್ಣುಗಳು, ಬಾಳೆ ಗಿಡಗಳಿಂದ ಅಲಂಕರಿಸಿದ ರಥದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಮತ್ತು ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪಿಸಿ ವಿವಿಧ ಮಂಗಳವಾದ್ಯಗಳೊಂದಿಗೆ  ರಥವನ್ನು ಎಳೆಯುವ ಮೂಲಕ ಭಕ್ತರು ಭಕ್ತಿ ಸಮರ್ಪಿಸಿದರು. 

ಈ ಸಂದರ್ಭದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಕಮಿಟಿಯ ಗೌರವಾಧ್ಯಕ್ಷ ಎಸ್.ಜಿ.ಚಂದ್ರಪ್ಪ, ಅಧ್ಯಕ್ಷ ಹೊಳೆ ಬಸಪ್ಪ, ಉಪಾಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಕೆ.ಸಿ.ಪ್ರಭಾಕರ್, ಖಜಾಂಚಿ ತರಗನಹಳ್ಳಿ ರಮೇಶ್ ಗೌಡ, ಸದಸ್ಯರುಗಳಾದ ಭೋವಿ ರಾಜು, ಶಾಂತರಾಜ್ ಸ್ವಾಮಿ, ಟಿ.ಜಿ.ಶಿವನಗೌಡ, ಎ.ಎಂ. ಮಲ್ಲಿಕಾರ್ಜುನ, ಕುಬೇರಪ್ಪ, ನಿಂಗಪ್ಪ, ಎಚ್.ಕೆ.ರಾಜು ಇನ್ನಿತರರಿದ್ದರು.

error: Content is protected !!