ನಿರಾಶಾದಾಯಕ ಆಯವ್ಯಯ

ನಿರಾಶಾದಾಯಕ ಆಯವ್ಯಯ

ದಾವಣಗೆರೆ, ಮಾ.9- ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ರೈತಪರ ಯಾವುದೇ ಹೊಸ ಯೋಜನೆಗಳು ಇಲ್ಲದಿರುವುದರಿಂದ ಇದೊಂದು ನಿರಾಶಾದಾಯಕ ಆಯವ್ಯಯವಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳ್ ಹೇಳಿದ್ದಾರೆ.

ಜಿಲ್ಲೆಯ ರೈತರ ಬಹುದಿನಗಳ ಬೇಡಿಕೆ ಮೆಕ್ಕೆಜೋಳ ಸಂಸ್ಕರಣೆ ಘಟಕದ ಪ್ರಸ್ತಾವ ಇಲ್ಲ. ಆವರ್ತ ನಿಧಿಯ ಪ್ರಸ್ತಾವ ಇಲ್ಲ. ಪಂಪ್‌ಸೆಟ್‌ ಸಂಪರ್ಕಕ್ಕೆ ತಗುಲುವ ವೆಚ್ಚವನ್ನು ರೈತರೇ ಭರಿಸಬೇಕು ಎಂದು ಹೇಳುವ ಕಾಂಗ್ರೆಸ್ ಸರ್ಕಾರ ಪಂಪ್ ಸೆಟ್ ಅಳವಡಿಸಲು 50 ಸಾವಿರ ಧನ ಸಹಾಯ ಎಂದು ಘೋಷಿಸಿರುವುದು ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ.

error: Content is protected !!