ದಾವಣಗೆರೆ, ಮಾ.10- ಸ್ಪೂರ್ತಿ ಸಾಂಸ್ಕೃತಿಕ ಸೇವಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇತ್ತೀಚಿಗೆ ನಗರದ ಕುವೆಂಪು ಕನ್ನಡ ಭವನದಲ್ಲಿ ಬಯಲಾಟ ಪ್ರದರ್ಶನ ಹಾಗೂ ಬಯಲಾಟ ಗೀತೆಗಳ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ರಾಜ, ಮಂತ್ರಿ, ಸೇನಾನಿ ಮತ್ತು ದೊರೆ ಇನ್ನೂ ಅನೇಕ ರೀತಿಯ ಪಾತ್ರಗಳಲ್ಲಿ ಕಾಣಿಸುವ ಕಲಾವಿದರ ಜೀವನ ಕಷ್ಟಕರವಾಗಿರುತ್ತದೆ. ಇವರನ್ನು ಪ್ರೋತ್ಸಾಹಿಸಲು ಸರ್ಕಾರ ಅಷ್ಟೇ ಅಲ್ಲದೇ ಜನರೂ ಮುಂದೆ ಬರಬೇಕು ಎಂದು ಯರಗುಂಟೆಯ ಪರಮೇಶ್ವರ ಸ್ವಾಮಿಗಳು ತಿಳಿಸಿದರು.
ಸ್ಪೂರ್ತಿ ಸಾಂಸ್ಕೃತಿಕ ಸೇವಾ ಸಂಘವು ನಾಡಿನ ಕಲೆ ಮತ್ತು ಕಲಾವಿದರಿಗೆ ಸುಮಾರು 33 ವರ್ಷಗಳಿಂದ ಸ್ಪೂರ್ತಿ ತುಂಬುತ್ತಾ ಬಂದಿರುವುದು ಹೆಮ್ಮೆಯ ವಿಷಯ ಎಂದರು.
ಈ ವೇಳೆ ಸಂಘದ ಅಧ್ಯಕ್ಷ ಎನ್.ಎಸ್ ರಾಜು, ಎಸ್. ಪ್ರೇಮಾ, ಪಂಕಜಾ, ದಯಾನಂದ್, ಶಿವಣ್ಣ, ರಂಗನಾಥ, ಪಿ. ಖಾದರ್ ಮತ್ತಿತರರಿದ್ದರು.