ಹರಪನಹಳ್ಳಿ, ಮಾ. 9 – ಸಂತ ಸೇವಾ ಲಾಲ್‌ರವರ 286ನೇ ಜಯಂತಿ ಅಂಗವಾಗಿ ಶನಿವಾರ ಅದ್ಧೂರಿ ಮೆರವಣಿಗೆ ನಡೆಯಿತು. ಜಾನಪದ ವಾದ್ಯ, ಲಂಬಾಣಿ ಮಹಿಳೆಯರ ಸಾಂಪ್ರ ದಾಯಿಕ ನೃತ್ಯ ಗಮನ ಸೆಳೆಯಿತು.
ಪಟ್ಟಣದ ಹರಿಹರ ವೃತ್ತದಿಂದ ಬಂಜಾರ್ ಸಮುದಾಯದ ಜಾನಪದ ವಾದ್ಯದೊಂದಿಗೆ ಯುವಕ, ಯುವಕರು, ರಾಜಕಾರಾಣಿಗಳು, ಸರ್ಕಾರಿ ನೌಕರು, ವಿದ್ಯಾರ್ಥಿ, ವಿದ್ಯಾರ್ಥಿ ನಿಯರು ಸಡಗರ ಸಂಭ್ರಮದಿಂದ ಕುಣಿದು ಕುಪ್ಪಳಿಸಿ ದರು.
ನಂತರ ಪ್ರವಾಸಿ ಮಂದಿರ, ವೃತ್ತಕ್ಕೆ ತೆರಳಿ ನಂತರ ಪೊಲೀಸ್ ಲೈನ್ ಹಿಂಭಾಗ ಇರುವ ಸಂತ ಶ್ರೀ ಸೇವಾಲಾಲ್ ಮಹಾರಾಜ ದೇವಸ್ಥಾನದಲ್ಲಿ ಪೂಜಾ ಕಾರ್ಯವನ್ನು ನೆರವೇರಿಸಿ.
ಈ ಸಂದರ್ಭದಲ್ಲಿ ಬಂಜಾರ್ ಸಮಾಜದ ಶಿವ ಪ್ರಕಾಶ್ ಸ್ವಾಮೀಜಿ, ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಸಮಾಜದ ಮುಖಂಡರಾದ ಡಾ. ರಮೇಶ್ ನಾಯ್ಕ, ಕುಬೆಂದ್ರ ನಾಯ್ಕ, ಕಿರಣ್ ಕುಮಾರ್, ರಾಘುರಾಮ್ ನಾಯ್ಕ, ಶಿರಗಾರನಹಳ್ಳಿ ವಿಶ್ವನಾಥ್, ತಿಮ್ಮನಾಯ್ಕ, ಮಂಜ್ಯಾನಾಯ್ಕ, ಹಾಲೇಶ್ ನಾಯ್ಕ, ಗೋಪಿನಾಯ್ಕ, ಆರ್. ಶಶಿಕುಮಾರ್ ನಾಯ್ಕ, ವಿ. ಮಲ್ಲೇಶ್ ನಾಯ್ಕ, ಸೇರಿದಂತೆ ಇತರರು ಇದ್ದರು.