ದಾವಣಗೆರೆ, ಮಾ.10- ವಚನಾಮೃತ ಬಳಗ ಮತ್ತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಸಮೀಪದ ಆವರಗೆರೆಯ ಭಗವಾನ್ ಮಹಾವೀರ ಗೋಶಾಲೆಯಲ್ಲಿ ಶನಿವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ ನೆರವೇರಿತು.
ಶಸಾಪ ನಗರ ಘಟಕದ ಅಧ್ಯಕ್ಷ ಎಂ. ಪರಮೇಶ್ವರಪ್ಪ, ವಚನಾಮೃತ ಬಳಗದ ಅಧ್ಯಕ್ಷೆ ಸೌಮ್ಯ ಸತೀಶ್, ದತ್ತಿ ಉಪನ್ಯಾಸಕಿ ಡಾ.ಹೆಚ್. ಅನಿತ ದೊಡ್ಡಗೌಡರ್, ಗೋಶಾಲೆಯ ಪ್ರಧಾನ ಕಾರ್ಯದರ್ಶಿ ದಿನೇಶ್, ಮಲ್ಲಿಕಾರ್ಜುನಪ್ಪ, ಎನ್.ಎಸ್. ರಾಜು, ಸುಮಾ ಕೊಟ್ರೇಶ್, ಸುಧಾ ಮಲ್ಕಪ್ಪ, ಸುಜಾತ, ಸುಮಾ, ಪಾರ್ವತಿ, ಸವಿತಾ ಇತರರು ಇದ್ದರು.