ಹರಪನಹಳ್ಳಿ, ಮಾ. 10 – ತಾಲ್ಲೂಕಿನ ಹೊಸ ಓಬಳಾಪುರ ಹಾಗೂ ಯರಬಾಳು ಗ್ರಾಮದಲ್ಲಿ 2024ನೇ ಸಾಲಿನ ಕಲ್ಯಾಣ ಪಥ ಯೋಜನೆಯಡಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ್ ರವರು ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಬೇರಪ್ಪ, ಮುಖಂಡ ಮುತ್ತಿಗಿ ಜಂಬಣ್ಣ, ಮೈದೂರು ರಾಮಣ್ಣ, ಚಿಗಟೇರಿ ಜಂಬಣ್ಣ, ಮತ್ತೂರು ಬಸವರಾಜ, ಸಿದ್ದಲಿಂಗಸ್ವಾಮಿ, ಹಲವಾಗಲು ಹೆಚ್.ಟಿ. ವನಜಾಕ್ಷಮ್ಮ, ದನಕಾಯ ಸೋಮಲಿಂಗಪ್ಪ, ಇಂಜಿನಿಯರ್ ಕುಬೇಂದ್ರನಾಯ್ಕ ಸೇರಿದಂತೆ ಇತರರು ಇದ್ದರು.