ಜನ್ಮ ದಿನಕ್ಕೆ ದುಂದು ವೆಚ್ಚ ಬೇಡ ಸಂಸದರ ಮನವಿ

ಜನ್ಮ ದಿನಕ್ಕೆ  ದುಂದು ವೆಚ್ಚ ಬೇಡ  ಸಂಸದರ ಮನವಿ

ದಾವಣಗೆರೆ, ಮಾ. 10 – ತಮ್ಮ ಜನ್ಮ ದಿನಕ್ಕೆ ಶುಭ ಕೋರಲು ಅಭಿಮಾನಿ ಗಳು, ಕಾರ್ಯಕರ್ತರು ಹಾಗೂ ಮುಖಂಡರು ದುಂದು ವೆಚ್ಚ ಮಾಡಬಾರದು ಎಂದು ಲೋಕಸಭಾ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಮನವಿ ಮಾಡಿದ್ದಾರೆ. 

ಇದೇ ದಿನಾಂಕ 15 ರಂದು ಸಂಸದರ ಜನ್ಮ ದಿನವಿದ್ದು, ಈ ದಿನ ಶುಭಾಶಯ ಕೋರಲು ಬ್ಯಾನರ್ ಅಳವಡಿಸುವುದು, ಜಾಹೀರಾತು ನೀಡುವುದು, ಹಾರ, ಉಡುಗೊರೆ, ಸಂಭ್ರಮಾಚರಣೆ ಮಾಡುವ ಮೂಲಕ ದುಂದು ವೆಚ್ಚ ಸಲ್ಲದು ಎಂದು ಸಂಸದರು ಮನವಿ ಮಾಡಿದ್ದಾರೆ.

error: Content is protected !!