ದಾವಣಗೆರೆ ತಾಲ್ಲೂಕಿನ ದೊಡ್ಡಬಾತಿ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಸ್ವಾಮಿಯ ಮಹಾರಥೋ ತ್ಸವವು ಇದೇ ದಿನಾಂಕ 13 ಗುರುವಾರ ರಾತ್ರಿ 12 ಗಂಟೆ ನಂತರ ನಡೆಯಲಿದೆ. ಇಂದು ರಾತ್ರಿ ಬಣಕಾರ ಮನೆತನದವರಿಂದ ಶ್ರೀ ಸ್ವಾಮಿಗೆ ಅರಿಶಿಣ ಎಣ್ಣೆ ಕಾರ್ಯ ಮತ್ತು ಉಚ್ಛಾಯ ನಡೆಯಲಿದೆ. ನಾಳೆ ಬುಧವಾರ ಆವರಗೊಳ್ಳದ ಶ್ರೀ ವೀರಭದ್ರೇಶ್ವರ ಸ್ವಾಮಿಯು ದೊಡ್ಡಬಾತಿಗೆ ದಯಪಾಲಿಸಲಿದೆ. ರಾತ್ರಿ ಪತ್ತಾರ ಮನೆತನದವರಿಂದ ಅರಿಶಿಣ ಎಣ್ಣೆ ಕಾರ್ಯಕ್ರಮ ಜರುಗಲಿದೆ. ದಿನಾಂಕ 14ರ ಶುಕ್ರವಾರ ಓಕುಳಿ ಕಾರ್ಯ ನಡೆಯಲಿದೆ.
ದೊಡ್ಡಬಾತಿಯಲ್ಲಿ ಇಂದು ಉಚ್ಛಾಯ
