ಜಗಳೂರು ತಾ. ನಿವೃತ್ತ ನೇತ್ರಾಧಿಕಾರಿ ಸನ್ಮಾನ

ಜಗಳೂರು ತಾ. ನಿವೃತ್ತ ನೇತ್ರಾಧಿಕಾರಿ ಸನ್ಮಾನ

ಜಗಳೂರು, ಮಾ. 5 – ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ನೇತ್ರಾಧಿಕಾರಿ ಪರಮೇಶ್ವರಪ್ಪ ಅವರಿಗೆ ಆಸ್ಪತ್ರೆಯಲ್ಲಿ ಆತ್ಮೀಯವಾಗಿ ಗೌರವಿಸಲಾಯಿತು.

ಬುಧವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪರಮೇಶ್ವರಪ್ಪ, 35 ವರ್ಷಗಳ ಕಾಲ ನಿರಂತ ರವಾಗಿ ಜಗಳೂರಿ ನಲ್ಲಿಯೇ ಸೇವೆಗೈದ ತೃಪ್ತಿ ನನಗಿದೆ. ವೃತ್ತಿ ಜೀವನಕ್ಕೆ ಸಹಕರಿಸಿದ ಎಲ್ಲರಿಗೂ ಸ್ಮರಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಷಣ್ಮುಖಪ್ಪ, ಡಾ. ಕಲ್ಪನಾ, ಪತ್ನಿ ಪುಷ್ಪಾ ಪರಮೇಶ್ವರಪ್ಪ, ಪುತ್ರ ಡಾ. ನಿತಿನ್, ಸಿಬ್ಬಂದಿಗಳಾದ ಕೆ. ಸುರೇಶ್ ಬಾಬು, ಮೀನಾಕ್ಷಮ್ಮ, ರೂಪ, ಮಂಜಮ್ಮ, ಮಲ್ಲಮ್ಮ, ರೂಪ ಸೇರಿದಂತೆ ಶುಶ್ರೂಷಕಿಯರು ಉಪಸ್ಥಿತರಿದ್ದರು.

error: Content is protected !!