ಉಪನ್ಯಾಸಕ ಮಾ.ಬ. ನಾಗರಾಜ್ ಕುಂದೂರು ಅವರಿಗೆ ಅಕ್ಕ ಪ್ರಶಸ್ತಿ

ಉಪನ್ಯಾಸಕ ಮಾ.ಬ. ನಾಗರಾಜ್ ಕುಂದೂರು ಅವರಿಗೆ ಅಕ್ಕ ಪ್ರಶಸ್ತಿ

ದಾವಣಗೆರೆ, ಮಾ. 5 – ಬೆಂಗಳೂರಿನಲ್ಲಿ ನಡೆಯುವ `ಸಂಸ್ಕೃತಿ ಸಂಗಮ’ ಸಮಾರಂಭ ದಲ್ಲಿ `ಅಕ್ಕ ರಾಜ್ಯ ಪ್ರಶಸ್ತಿ -2025′  ಪುರಸ್ಕಾರಕ್ಕೆ ನಗರದ ಉಪನ್ಯಾಸಕ ಮಾ.ಬ. ನಾಗರಾಜ್ ಕುಂದೂರು ಅವರು ಭಾಜನರಾಗಿದ್ದಾರೆ.

ಬರಹಗಾರರು, ಕಲಾವಿದರು, ವಾಗ್ಗೇಯಕಾರರು, ಸಾಹಿತ್ಯದ ಸುಧೆಯನ್ನು ಉಣಬಡಿಸುವ ಮತ್ತು ಕನ್ನಡ ಕಟ್ಟುವ ಶ್ರೇಷ್ಠ ಕೈಂಕರ್ಯದಲ್ಲಿ ತೊಡಗಿರುವ ನಾಗರಾಜ್ ಇವರು ಕಳೆದ ಹದಿನಾರು ವರ್ಷ ಗಳಿಂದ ಅಧ್ಯಾಪನ ವೃತ್ತಿಯಲ್ಲಿ ತೊಡಗಿದ್ದಾರೆ.  ಶಿಕ್ಷಕ ವೃತ್ತಿಯ ಸೇವಾ ಮನೋಭಾವ, ಸಾಹಿತ್ಯ ಕ್ಷೇತ್ರದಲ್ಲಿನ ಗಣನೀಯ ಸೇವೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿಯನ್ನು  ನಾಡಿದ್ದು ದಿನಾಂಕ 7ರ ಶುಕ್ರವಾರ  ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯುವ `ಸಂಸ್ಕೃತಿ ಸಂಗಮ – 2025′ ಸಮಾರಂಭದಲ್ಲಿ ನೀಡಲಾಗುತ್ತದೆ.

error: Content is protected !!