ಶ್ರೀ ಬಸವೇಶ್ವರ ದೇವರ ರಥೋತ್ಸವವು ಇಂದು ಸಾಯಂಕಾಲ 4.30 ಕ್ಕೆ ಶ್ರೀ ಬೀರಲಿಂಗೇಶ್ವರ ಕಾರಣಿಕೋತ್ಸವದ ನಂತರ ಶ್ರೀ ಬಸವೇಶ್ವರ ದೇವರ ಮಹಾ ರಥೋತ್ಸವವು ಜರುಗಲಿದೆ. ಬೆಳಗ್ಗೆ ರುದ್ರಾಭಿಷೇಕ ಪೂಜೆ ಬಳಿಕ ಸಣ್ಣ ಉತ್ಸವ ನಡೆಯಲಿದ್ದು, ಬೆಳಗ್ಗೆ 9 ಕ್ಕೆ ರಥಕ್ಕೆ ತೈಲಾಭಿಷೇಕ, ಮಧ್ಯಾಹ್ನ 12 ರಿಂದ ದಾಸೋಹ ಏರ್ಪಡಿಸಲಾಗಿದೆ. ನಾಳೆ ಬುಧವಾರ ಬೆಳಿಗ್ಗೆ 10 ಗಂಟೆಯಿಂದ ದೇವಸ್ಥಾನದಲ್ಲಿ ಜವಳ, ದಿಂಡು ಉರುಳು ಸೇರಿದಂತೆ ಇತ್ಯಾದಿ ಸೇವೆಗಳು ನಡೆ ಯಲಿದ್ದು, ರಾತ್ರಿ 8 ಕ್ಕೆ ಓಕುಳಿ ಬಳಿಕ ಎಲ್ಲಾ ದೇವರಗಳನ್ನು ಬೀಳ್ಕೊಡಲಾಗುವುದು.
April 3, 2025