ಹರಿಹರ, ಮಾ.3- ಅಂತರ ಜಿಲ್ಲಾ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಗ ಳನ್ನು ಬಂಧಿಸಿರುವ ಇಲ್ಲಿನ ಪೊಲೀಸರು 10.30 ಲಕ್ಷ ರೂ. ಮೊತ್ತದ ಸ್ವತ್ತನ್ನು ವಶಪ ಡಿಸಿಕೊಂಡಿದ್ದಾರೆ. ಪ್ರವೀಣ ಆನಂದಪ್ಪ ಹಡಗಲಿ, ಆಕಾಶ್ ಮುದೋಳಕರ ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ ಎನ್.ಎಸ್-200 ಬೈಕ್, ಹೊಂಡಾ ಶೈನ್ ಬೈಕ್, 123.5 ಗ್ರಾಂ ಚಿನ್ನದ ಆಭರಣ, 59.72 ಗ್ರಾಂ ತೂಕದ ಒಂದು ಬೆಳ್ಳಿ ಲೋಟ ಮತ್ತು ಕೃತ್ಯಕ್ಕೆ ಬಳಸಿದ ಹೈಡ್ರಾಲಿಕ್ ಕಟ್ಟರ್ ವಶಪಡಿಸಿಕೊಳ್ಳಲಾಗಿದೆ.
ನಗರದ ಜೆ.ಸಿ. ಬಡಾವಣೆಯ ಪಿ.ಎನ್ ಗೋಪಿ ಅವರು ತಮ್ಮ ಹೊಂಡಾ ಶೈನ್ ಬೈಕ್ ಕಳ್ಳತನ ಆದ ಬಗ್ಗೆ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಲೆ ಮರೆಸಿಕೊಂಡಿರುವ ಇನ್ನೊಬ್ಬ ಆಪಾದಿತನ ಪತ್ತೆಯಾಗಬೇಕಿದ್ದು, ಈ ಕಳ್ಳರು ತರಹೇವಾರಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.