ಶಿವಧ್ಯಾನ ಮಂದಿರದಲ್ಲಿ ಮನಸೂರೆಗೊಂಡ ಭಕ್ತಿ ಗಾನಸುಧೆ

ಶಿವಧ್ಯಾನ ಮಂದಿರದಲ್ಲಿ ಮನಸೂರೆಗೊಂಡ ಭಕ್ತಿ ಗಾನಸುಧೆ

ಅರ್ಚನ ಉಡುಪ ಹಾಗೂ ತಂಡದವರಿಂದ ನಡೆದ ಭಕ್ತಿ ಮಂಜರಿ ಕಾರ್ಯಕ್ರಮ

ದಾವಣಗೆರೆ, ಮಾ.2- ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಸ್ಥಳೀಯ ಬಿಐಇಟಿ ಕಾಲೇಜಿನ ಆವರಣದಲ್ಲಿರುವ ಶಿವಧ್ಯಾನ ಮಂದಿರದ ಆವರಣದಲ್ಲಿ‌  ಹೆಸರಾಂತ ಹಿನ್ನೆಲೆ ಗಾಯಕರಾದ ಶ್ರೀಮತಿ ಅರ್ಚನ ಉಡುಪ ಹಾಗೂ ತಂಡದವರಿಂದ ನಡೆದ  ಭಕ್ತಿ – ಮಂಜರಿ ಕಾರ್ಯಕ್ರಮ ಜನಮನಸೂರೆಗೊಂಡಿತು.

ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಶಿವಧ್ಯಾನ ಮಂದಿರಕ್ಕೆ ಭೇಟಿ ನೀಡಿ ಭಕ್ತಿ ಸಮರ್ಪಿಸಿದರು. ನಂತರ ಭಕ್ತಿ ಮಂಜರಿ ಕಾರ್ಯಕ್ರಮವನ್ನು ನಡೆಸಿಕೊಟ್ಟ ಅರ್ಚನಾ ಉಡುಪ ತಂಡದವರಿಗೆ ಸನ್ಮಾನಿಸಿ, ಗೌರವಿಸಿದರು.

ಸಂಗೀತದ ಮೂಲಕ ಅರ್ಥಪೂರ್ಣ ಮಹಾಶಿವರಾತ್ರಿ ಆಚರಣೆ ಇಲ್ಲಿ ನಡೆದಿದೆ. ಸುಮಾರು ಮೂರುವರೆ ಗಂಟೆಗಳ‌ ಕಾಲ ಭಕ್ತಿಗೀತೆಗಳ ಮೂಲಕ ಅರ್ಚನ ಉಡುಪ ಮತ್ತು ತಂಡದವರು ಭಕ್ತಿಯ ಗಾನಸುಧೆ ಯೊಂದಿಗೆ ಭಾವನಾತ್ಮಕ ಮತ್ತು ಅಧ್ಯಾತ್ಮಿಕ ಅನುಭವ ನೀಡಿದ್ದಾರೆಂದು ಶ್ಲ್ಯಾಘಿಸಿದರು.

ತಂಡದವರ ಅತ್ಯಂತ ಶ್ರದ್ಧೆ ಮತ್ತು ತನ್ಮಯತೆಯ ಗಾಯನ  ದೈವೀಕ ಲೋಕದ ಅನುಭವ ನೀಡಿದೆ. ಶಿವಧ್ಯಾನ ಮಂದಿರದಲ್ಲಿ ಸಂಗೀತ‌ ಲೋಕವೇ ಸೃಷ್ಟಿಯಾಗಿತ್ತು ಎಂದಿದ್ದಾರೆ. ಈ ವೇಳೆ ಆನಂದ ಪರಮಾನಂದ, ವರಕವಿ ದ.ರಾ ಬೇಂದ್ರೆಯವರ ಕುರುಡು ಕಾಂಚಾಣ, ಶಿವಶಿವ ಎಂದರೆ ಭಯವಿಲ್ಲ, ನೀಡು ಶಿವ ನೀಡದಿರು ಶಿವ ಹಾಗೂ ಸತ್ಯಂ ಶಿವಂ ಸುಂದರಂ ಸೇರಿದಂತೆ ಭಕ್ತಿಗೀತೆಗಳ ಗಾಯನ ಜರುಗಿತು. 

ವಿಶೇಷವಾಗಿ ಬಾಪೂಜಿ ವಿದ್ಯಾ ಸಂಸ್ಥೆ ನಿರ್ದೇಶಕರಾದ ಸಂಪನ್‌ ಮುತಾಲಿಕ್ ಅವರು ಪ್ರಸ್ತುತ ಪಡಿಸಿದ ಜಾನಪದ ಸಂಗೀತ ಜನಮನಸೆಳೆಯಿತು. 

ಈ ಸಂದರ್ಭದಲ್ಲಿ ವೀರೇಶ್ ಪಾಟೀಲ್  ಸೇರಿದಂತೆ ಅನೇಕರಿದ್ದರು.

error: Content is protected !!