ಹರಪನಹಳ್ಳಿ, ಮಾ. 2 – ಪಟ್ಟಣದ ಕೊಟ್ಟೂರು ರಸ್ತೆ ಬಳಿ ಇರುವ ಭಾರತಿ ನಗರದ ಕರಿಬವೇಶ್ವರ ಸ್ವಾಮಿ ರಥೋತ್ಸವವು ಶನಿವಾರ ಮಧ್ಯಾಹ್ನ 12 ಗಂಟೆಗೆ ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಶಿವರಾತ್ರಿ ಹಬ್ಬದ ಅಂಗವಾಗಿ ಕಳೆದ ಮೂರು ದಿನಗಳಿಂದ ನೂತನ ಕರಿಬಸವೇಶ್ವರ ಕತೃ ಗದ್ದುಗೆಯ ನೂತನ ಶಿಲಾ ಮೂರ್ತಿಗೆ ಹೋಮ, ಹವನ ಮತ್ತು ಅಭಿಷೇಕ ಮಾಡಲಾಯಿತು. ರಥೋತ್ಸವದ ಸಂದರ್ಭದಲ್ಲಿ ಭಕ್ತರು ಬಾಳೆಹಣ್ಣು, ಉತ್ತತಿ ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. ಕರಿಬಸವೇಶ್ವರ ಸ್ವಾಮಿಯ ಧರ್ಮಕರ್ತ ವೀರೇಶ ಆಚಾರ್ಯ ಸ್ವಾಮಿಯ ಪಟವನ್ನು ಹಾರಾಜು ಮಾಡಿದರು. ಈ ಸಂದರ್ಭದಲ್ಲಿ ಮಂಜುನಾಥ ಬಡಗೇರ ಮಾನಪ್ಪ ರವಿಚಂದ್ರ, ಶಿಲ್ಪ, ಆಚಾರ್ಯ ನಾಗರಾಜ, ಬಸವರಾಜ ಸೇರಿದಂತೆ ಅನೇಕ ಇದ್ದರೂ
ಹರಪನಹಳ್ಳಿ : ಕರಿ ಬಸವೇಶ್ವರ ರಥೋತ್ಸವ
