ಹರಪನಹಳ್ಳಿ, ಮಾ. 4 – ಭೂಮಿಯ ಅಂತರ್ಜಲ ಹೆಚ್ಚಿಸಲು ಕೆರೆ ಹೂಳೆತ್ತುವುದು ಅತ್ಯವಶ್ಯಕವಾಗಿದೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಬಾಬು ಹೇಳಿದರು.
ತಾಲ್ಲೂಕಿನ ಚಟ್ನಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಂಚಾಪುರ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಕೆರೆ ಹೂಳು ತೆಗೆಯುವ ಕೆಲಸಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೆರೆಗಳಿಗೆ ನೀರು ಹರಿದರೆ ರೈತರು ಬದುಕುವಂತೆ ಆಗುತ್ತದೆ. ಕೆರೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹೂಳೆತ್ತುವ ಕಾಮಗಾರಿ ನಡೆದರೆ, ನೀರು ಸಂಗ್ರಹಣೆಗೆ ಅನುಕೂಲ ಆಗುತ್ತದೆ ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡ ಲಿಂಗರಾಜ ಫಣಿಯಾಪುರ ಮಾತನಾಡಿ ಇಂತಹ ಸಣ್ಣ ಸಣ್ಣ ಗ್ರಾಮಗಳನ್ನು ಗುರುತಿಸಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯ ಸಂಸ್ಥೆಯವರ ಕೆಲಸ ನಿಜಕ್ಕೂ ಶ್ಲ್ಯಾಘನೀಯ ಹಾಗೂ ಸರ್ಕಾರ ಬಂದು ಎರಡು ವರ್ಷ ಆಗುತ್ತಾ ಬಂದಿದೆ. ಎಲ್ಲೂ ಅಭಿವೃದ್ಧಿ ಕಾರ್ಯಗಳು ನಡೆಯು ತ್ತಿಲ್ಲ, ಇಂತಹ ಕೆಲಸ ಗಳಿಂದ ಗ್ರಾಮ ಗಳ ಜಾನುವಾರುಗಳಿಗೆ, ರೈತರ ಪಂಪಸೆಟ್‌ಗಳಿಗೆ, ನೀರು ಸಂಗ್ರಹಣವಾಗುವುದು, ರೈತರಿಗೆ ಆನುಕೂಲವಾಗುತ್ತದೆ ಮತ್ತು ಇಂತಹ ಹೂಳು ಎತ್ತುವ ಕೆಲಸಗಳಿಗೆ ಸರ್ಕಾರಗಳು ಎಚ್ಚೆತ್ತು ಅನುದಾನ ಹಾಕಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಆಶಾ, ಸಂಸ್ಥೆಯ ವಲಯಾಧಿಕಾರಿ ಗಳಾದ ಮಮತ, ಸೇವಾ ಪ್ರತಿನಿಧಿ ಅಶೋಕ, ಗ್ರಾಮ ಪಂಚಾಯಿತಿ ಸದಸ್ಯರಾದ ರೇಣುಕಮ್ಮ ಫಣಿಯಾಪುರ, ಪರಮೇಶಪ್ಪ, ಮಂಜಮ್ಮ, ಕಲ್ಲಹಳ್ಳಿ ಸುರೇಶ್, ಕೆರೆ ಸಮಿತಿಯ ರೇವಣ್ಣ, ಚಂದ್ರಪ್ಪ, ಬಸವರಾಜ, ಎನ್.ಆರ್. ದ್ಯಾಮಣ್ಣ, ಕೆ.ಹೆಚ್. ಏಕಾಂತಪ್ಪ, ಬಣಕಾರ ಬಸವರಾಜ, ಗಿರೀಶ್, ಪ್ರಭು ಸೇರಿದಂತೆ ಇತರರು ಉಪಸ್ಥಿತರಿದ್ದರು.