ದಾವಣಗೆರೆ, ಫೆ. 27 – ಬರುವ ಮಾರ್ಚ್ 1 ಮತ್ತು 2 ರಂದು ನಡೆಯಲಿರುವ 2025 ನೇ ಸಾಲಿನ ಹಂಪಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಗರದ ಹಿಂದೂಸ್ತಾನಿ ಗಾಯಕಿ ಕು. ಡಾ. ಪೃಥ್ವಿ ಎ.ಟಿ. ಐಗೂರು ಆಯ್ಕೆಯಾಗಿದ್ದಾರೆ.
ಮಾರ್ಚ್ 2ರ ಭಾನುವಾರ ಸಂಜೆ ಹಂಪಿಯ ಎದುರು ಬಸವಣ್ಣ ವೇದಿಕೆಯಲ್ಲಿ ನಡೆಯಲಿರುವ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯ ಕ್ರಮದಲ್ಲಿ ಡಾ. ಪೃಥ್ವಿ ಅವರು ತಮ್ಮ ಗಾಯನ ಪ್ರಸ್ತುತ ಪಡಿಸುವರು. ಸಂಗೀತ ಗುರು ಭೀಮಸೇನ ಜೋಶಿಯವರಿಂದ ಸಂಗೀತಾಭ್ಯಾಸ ಮಾಡಿರುವ ಡಾ. ಪೃಥ್ವಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಸೀನಿಯರ್ ಪರೀಕ್ಷೆ ಉತ್ತೀರ್ಣರಾಗಿದ್ದಾರೆ. ಪೃಥ್ವಿ, ನಗರದ ಬಾಪೂಜಿ ಆಸ್ಪತ್ರೆಯ ಲ್ಯಾಬ್ ಟೆಕ್ನೀಷಿಯನ್ ಎ.ಎನ್.ತಿಪ್ಪೇಸ್ವಾಮಿ ಐಗೂರು ಹಾಗೂ ಸಾಹಿತಿ ಗೀತಾ ತಿಪ್ಪೇಸ್ವಾಮಿ ಐಗೂರು ದಂಪತಿ ಪುತ್ರಿ.