ಜಿಲ್ಲೆಯಲ್ಲಿ 1500 ಪ್ಲಾಸ್ಟಿಕ್, ಅರ್ಧ ಹೆಲ್ಮೆಟ್‌ ವಶಕ್ಕೆ : ಎಸ್ಪಿ ಎಚ್ಚರ

ಜಿಲ್ಲೆಯಲ್ಲಿ 1500 ಪ್ಲಾಸ್ಟಿಕ್,  ಅರ್ಧ ಹೆಲ್ಮೆಟ್‌ ವಶಕ್ಕೆ : ಎಸ್ಪಿ ಎಚ್ಚರ

ದಾವಣಗೆರೆ, ಫೆ.27- ಜಿಲ್ಲಾ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್ ಅವರ ಸೂಚನೆ ಮೇರೆಗೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ.ಸಂತೋಷ್, ಜಿ.ಮಂಜುನಾಥ್ ಹಾಗೂ ನಗರ ಡಿವೈಎಸ್ಪಿ ಶರಣ ಬಸವೇಶ್ವರ ಅವರುಗಳ ಮಾರ್ಗದರ್ಶನದಲ್ಲಿ ಸಿಪಿಐ ನಲವಾಗಲು ಮಂಜುನಾಥ್ ಅವರ ನೇತೃತ್ವದಲ್ಲಿ ಸುರಕ್ಷಿತವಲ್ಲದ ಪ್ಲಾಸ್ಟಿಕ್ ಮತ್ತು ಅರ್ಧ ಹೆಲ್ಮೆಟ್‌ಗಳನ್ನು ಇಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಅಂಗಡಿಗಳಲ್ಲಿ ಸುಮಾರು 1500 ಪ್ಲಾಸ್ಟಿಕ್, ಅರ್ಧ ಹೆಲ್ಮೆಟ್‌ಗಳನ್ನು ನಾಶಪಡಿಸುವ ಉದ್ದೇಶಕ್ಕಾಗಿ ವಶಕ್ಕೆ ಪಡೆಯಲಾಯಿತು.

ಈ ಸಂದರ್ಭದಲ್ಲಿ ದಕ್ಷಿಣ ಮತ್ತು ಉತ್ತರ ಸಂಚಾರ ಠಾಣೆ ಪಿಎಸ್‌ಐ, ಎಎಸ್ಐ ಮತ್ತು ಸಿಬ್ಬಂದಿಗಳು ಹಾಜರಿದ್ದರು.

ಇನ್ನೂ ಮುಂದೆ ಪ್ಲಾಸ್ಟಿಕ್ ಹಾಗೂ ಅರ್ಧ ಹೆಲ್ಮೆಟ್‌ಗಳನ್ನು ಮಾರಾಟ ಮಾಡಬಾರದು ಎಂದು ಎಸ್ಪಿ ಉಮಾ ಪ್ರಶಾಂತ್ ಅವರು ಎಚ್ಚರಿಸಿದ್ದಾರೆ.

error: Content is protected !!